Directory

ನಾಮಪದ - ವಿಕಿಪೀಡಿಯ ವಿಷಯಕ್ಕೆ ಹೋಗು

ನಾಮಪದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾಷಾಶಾಸ್ತ್ರದಲ್ಲಿ, ಒಂದು ನಾಮಪದ ವು ಒಂದು ದೊಡ್ಡ, ಮುಕ್ತ ನಿಘಂಟಿನ ವರ್ಗದ ಒಂದು ಸದಸ್ಯನಾಗಿದ್ದು, ಸದರಿ ನಿಘಂಟಿನ ವರ್ಗದ ಸದಸ್ಯರು ವಾಕ್ಯಾಂಶವೊಂದರ ಕರ್ತೃಪದ, ಕ್ರಿಯಾಪದವೊಂದರ ಕರ್ಮ, ಅಥವಾ ಉಪಸರ್ಗವೊಂದರ ಕರ್ಮದಲ್ಲಿನ ಮುಖ್ಯ ಪದವಾಗಿ ಸಂಭವಿಸಲು ಸಾಧ್ಯವಿದೆ.[]

ನಿಘಂಟಿನ ವರ್ಗಗಳ ಸದಸ್ಯರು, ಅಭಿವ್ಯಕ್ತಿಗಳ ಇತರ ಬಗೆಗಳೊಂದಿಗೆ ಹೇಗೆ ಬೆರೆಯುತ್ತವೆ ಎಂಬುದರ ಪರಿಭಾಷೆಯಲ್ಲಿ ನಿಘಂಟಿನ ವರ್ಗಗಳು ವ್ಯಾಖ್ಯಾನಿಸಲ್ಪಡುತ್ತವೆ. ನಾಮಪದಗಳಿಗೆ ಸಂಬಂಧಿಸಿದ ವಾಕ್ಯರಚನೆಯ ನಿಯಮಗಳು ಭಾಷೆಯಿಂದ ಭಾಷೆಗೆ ಬದಲಾಗುತ್ತವೆ. ಇಂಗ್ಲಿಷ್‌ ಭಾಷೆಯಲ್ಲಿ, ನಾಮಪದಗಳನ್ನು ವ್ಯಾಖ್ಯಾನಿಸುವಾಗ, ಗುಣವಾಚಿಗಳು ಹಾಗೂ ಗುಣವನ್ನು ಸೂಚಿಸುವ ಗುಣವಾಚಕಗಳೊಂದಿಗೆ ಸಂಭವಿಸಬಲ್ಲ ಮತ್ತು ನಾಮಪದದ ವಾಕ್ಯಾಂಗವೊಂದರ ಪ್ರಧಾನಭಾಗವಾಗಿ ಕಾರ್ಯನಿರ್ವಹಿಸಬಲ್ಲ ಪದಗಳಾಗಿ ನಾಮಪದಗಳು ವಿವರಿಸಲ್ಪಡುತ್ತವೆ.

ಸಾಂಪ್ರದಾಯಿಕ ಇಂಗ್ಲಿಷ್‌ ವ್ಯಾಕರಣದಲ್ಲಿ, ನಾಮಪದವು ಎಂಟು ಪದವರ್ಗ ವಾಚಕಗಳಲ್ಲಿ ಒಂದೆನಿಸಿಕೊಂಡಿದೆ.

ಇತಿಹಾಸ

[ಬದಲಾಯಿಸಿ]

ನಾಮಪದದ ಆಂಗ್ಲರೂಪವಾದ 'ನೌನ್‌' ಎಂಬ ಪದವು ಲ್ಯಾಟಿನ್‌ಭಾಷೆಯ ನಾಮೆನ್‌ ಎಂಬುದರಿಂದ ಬಂದಿದ್ದು, ಹೆಸರು ಎಂಬುದು ಇದರರ್ಥವಾಗಿದೆ. ನಾಮಪದಗಳಂಥ ಪದವರ್ಗಗಳು ...[[|Pāṇini]]ನಂಥ ಸಂಸ್ಕೃತ ವ್ಯಾಕರಣಜ್ಞನಿಂದ ಹಾಗೂ ಡಯೋನಿಸಿಯೋಸ್‌ ಥ್ರಾಕ್ಸ್‌‌ನಂಥ ಪ್ರಾಚೀನ ಗ್ರೀಕರಿಂದ ಮೊದಲು ವಿವರಿಸಲ್ಪಟ್ಟವು, ಮತ್ತು ಅವುಗಳ ಶಬ್ದರೂಪಾತ್ಮಕ ಲಕ್ಷಣಗಳ ಪರಿಭಾಷೆಯಲ್ಲಿ ವ್ಯಾಖ್ಯಾನಿಸಲ್ಪಟ್ಟವು. ಉದಾಹರಣೆಗೆ, ಪ್ರಾಚೀನ ಗ್ರೀಕ್‌ನಲ್ಲಿ, ಚತುರ್ಥೀ ವಿಭಕ್ತಿ ಅಥವಾ ದ್ವಿತೀಯಾ ವಿಭಕ್ತಿಯಂಥ ವ್ಯಾಕರಣದ ವಿಭಕ್ತಿಗಳಿಗೆ ಸಂಬಂಧಿಸಿದಂತೆ ನಾಮಪದಗಳು ರೂಪನಿಷ್ಪತ್ತಿಮಾಡುತ್ತವೆ. ರ

ನಾಮಪದಗಳ ವಿಭಿನ್ನ ವ್ಯಾಖ್ಯಾನಗಳು

[ಬದಲಾಯಿಸಿ]

ಸ್ವಾಭಾವಿಕ ಭಾಷೆಯ ಅಭಿವ್ಯಕ್ತಿಗಳು ವಿಭಿನ್ನ ಮಟ್ಟಗಳಲ್ಲಿರುವ ಲಕ್ಷಣಗಳನ್ನು ಹೊಂದಿರುತ್ತವೆ. ಅವು ಔಪಚಾರಿಕ ಲಕ್ಷಣಗಳನ್ನು ಹೊಂದಿರುತ್ತವೆ, ಅಂದರೆ, ಯಾವ ಬಗೆಯ ಶಬ್ದರೂಪಾತ್ಮಕ ಪೂರ್ವಪ್ರತ್ಯಯಗಳು ಅಥವಾ ಉತ್ತರ ಪ್ರತ್ಯಯಗಳನ್ನು ಅವು ತೆಗೆದುಕೊಳ್ಳುತ್ತವೆ ಮತ್ತು ಯಾವ ಬಗೆಯ ಇತರ ಅಭಿವ್ಯಕ್ತಿಗಳೊಂದಿಗೆ ಅವು ಸೇರುತ್ತವೆ ಎಂಬುದು ಈ ಔಪಚಾರಿಕ ಲಕ್ಷಣಗಳಲ್ಲಿ ಸೇರಿರುತ್ತವೆ; ಆದರೆ ಶಬ್ದಾರ್ಥಕ್ಕೆ ಸಂಬಂಧಿಸಿದ ಲಕ್ಷಣಗಳನ್ನೂ ಸಹ, ಅಂದರೆ, ಅವುಗಳ ಅರ್ಥಕ್ಕೆ ಸಂಬಂಧಿಸಿರುವ ಲಕ್ಷಣಗಳನ್ನೂ ಅವು ಹೊಂದಿರುತ್ತವೆ. ಈ ಲೇಖನದ ಮೊದಲಲ್ಲಿ ನಾಮಪದವೊಂದರ ವ್ಯಾಖ್ಯಾನವು ಈ ರೀತಿಯಾಗಿ ಒಂದು ಔಪಚಾರಿಕ , ಸಾಂಪ್ರದಾಯಿಕ ವ್ಯಾಕರಣಬದ್ಧವಾದ ವ್ಯಾಖ್ಯಾನವಾಗಿದೆ. ಆ ವ್ಯಾಖ್ಯಾನವು ಬಹುಪಾಲು ಭಾಗಕ್ಕೆ ಸಂಬಂಧಿಸಿದಂತೆ ನಿರ್ವಿವಾದವಾಗಿರುವಂಥದ್ದು ಎಂದು ಪರಿಗಣಿಸಲ್ಪಟ್ಟಿದೆ ಮತ್ತು ಬಹುಪಾಲು ನಾಮಪದಗಳನ್ನು ನಾಮಪದಗಳಲ್ಲದವುಗಳಿಂದ ಪರಿಣಾಮಕಾರಿಯಾಗಿ ಪ್ರತ್ಯೇಕಿಸುವಲ್ಲಿ ಕೆಲವೊಂದು ಭಾಷೆಗಳ ಬಳಕೆದಾರರಿಗೆ ಅದು ಸಾಧನವಾಗಿ ಒದಗಿಬರುತ್ತದೆ. ಆದಾಗ್ಯೂ, ಇದು ಎಲ್ಲಾ ಭಾಷೆಗಳಲ್ಲಿನ ನಾಮಪದಗಳಿಗೆ ಅನ್ವಯವಾಗುವುದಿಲ್ಲ ಎಂಬುದು ಇದರ ಅನನುಕೂಲವಾಗಿದೆ. ಉದಾಹರಣೆಗೆ ರಷ್ಯನ್‌ ಭಾಷೆಯಲ್ಲಿ, ಯಾವುದೇ ನಿರ್ದೇಶಕ ಗುಣವಾಚಿಗಳಿಲ್ಲ; ಆದ್ದರಿಂದ ನಾಮಪದಗಳನ್ನು ನಿರ್ದೇಶಕ ಗುಣವಾಚಿಗಳಿಂದ ಮಾರ್ಪಾಡುಗೊಂಡಿರುವ ಪದಗಳು ಎಂಬುದಾಗಿ ಓರ್ವರು ಇಲ್ಲಿ ವ್ಯಾಖ್ಯಾನಿಸಲಾಗುವುದಿಲ್ಲ. ನಾಮಪದಗಳನ್ನು ಅವುಗಳ ಶಬ್ದಾರ್ಥಕ್ಕೆ ಸಂಬಂಧಿಸಿದ ಲಕ್ಷಣಗಳ ಪರಿಭಾಷೆಯಲ್ಲಿ ವ್ಯಾಖ್ಯಾನಿಸುವ ಹಲವಾರು ಪ್ರಯತ್ನಗಳೂ ನಡೆದುಕೊಂಡು ಬಂದಿವೆ. ಇವುಗಳ ಪೈಕಿ ಅನೇಕವು ವಿವಾದಾತ್ಮಕವಾಗಿದ್ದರೂ, ಕೆಲವೊಂದನ್ನು ಈ ಕೆಳಗೆ ಚರ್ಚಿಸಲಾಗಿದೆ.

ವಸ್ತುಗಳಿಗಾಗಿರುವ ಹೆಸರುಗಳು

[ಬದಲಾಯಿಸಿ]

ಸಾಂಪ್ರದಾಯಿಕ ಶಾಲಾ ವ್ಯಾಕರಣಗಳಲ್ಲಿ ಓರ್ವರಿಗೆ ಅನೇಕವೇಳೆ ಎದುರಾಗುವ ನಾಮಪದಗಳ ವ್ಯಾಖ್ಯಾನದ ಅನುಸಾರ, ನಾಮಪದಗಳು ಎಲ್ಲಾ ಮತ್ತು ಆ ಏಕೈಕ ಅಭಿವ್ಯಕ್ತಿಗಳಾಗಿದ್ದು ಅವು ಒಂದು ವ್ಯಕ್ತಿ , ಸ್ಥಳ , ವಸ್ತು , ಘಟನೆ , ವಿಷಯ , ಗುಣಮಟ್ಟ , ಪ್ರಮಾಣ , ಅಥವಾ ಪರಿಕಲ್ಪನೆ , ಇತ್ಯಾದಿಯನ್ನು ಉಲ್ಲೇಖಿಸುತ್ತವೆ. ಇದು ಶಬ್ದಾರ್ಥಕ್ಕೆ ಸಂಬಂಧಿಸಿದ ಒಂದು ವ್ಯಾಖ್ಯಾನವಾಗಿದೆ. ಇದು ಬೋಧಪ್ರದವಾಗಿಲ್ಲದ ಅಥವಾ ಮಾಹಿತಿಪೂರ್ಣವಾಗಿಲ್ಲದ ವ್ಯಾಖ್ಯಾನ ಎಂದು ಸಮಕಾಲೀನ ಭಾಷಾಶಾಸ್ತ್ರಜ್ಞರಿಂದ ಟೀಕೆಗೆ ಒಳಗಾಗಿದೆ.[ಸೂಕ್ತ ಉಲ್ಲೇಖನ ಬೇಕು] ನಾಮಪದಗಳು ಪ್ರಪಂಚದಲ್ಲಿನ ವಸ್ತು ವಿನ ಪೈಕಿ ಯಾವ ಬಗೆಯ ವಸ್ತುವಿಗೆ ಉಲ್ಲೇಖಿಸಲ್ಪಡುತ್ತವೆ ಅಥವಾ ಯಾವ ವಸ್ತುವನ್ನು ಅವು ತಿಳಿಯಪಡಿಸುತ್ತವೆ ಎಂಬುದರ ಪರಿಭಾಷೆಯಲ್ಲಿ ಯಾರಾದರೊಬ್ಬರು ನಾಮಪದಗಳನ್ನು (ಅಥವಾ ಇತರ ವ್ಯಾಕರಣಬದ್ಧವಾದ ವರ್ಗಗಳನ್ನು) ಯಶಸ್ವಿಯಾಗಿ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸಮಕಾಲೀನ ಭಾಷಾಶಾಸ್ತ್ರಜ್ಞರು ಸಾಮಾನ್ಯವಾಗಿ ಒಪ್ಪುತ್ತಾರೆ. ಯಾವುದು ನಾಮಪದಗಳು ಆಗಿವೆ ಎಂಬುದನ್ನು ವ್ಯಾಖ್ಯಾನಿಸಲು, ತುಲನಾತ್ಮಕವಾಗಿ ಸಾಮಾನ್ಯವಾಗಿರುವ ನಾಮಪದಗಳನ್ನು (ವಸ್ತು , ವಿದ್ಯಮಾನ , ಘಟನೆ ) ವ್ಯಾಖ್ಯಾನವು ಬಳಸಿಕೊಳ್ಳುತ್ತದೆ ಎಂಬುದು ಜಟಿಲ ಪ್ರಶ್ನೆಯ ಒಂದು ಭಾಗವಾಗಿದೆ.

ಜೀವಿವರ್ಗೀಕರಣದ ಶ್ರೇಣಿ ವ್ಯವಸ್ಥೆಗಳಲ್ಲಿ ಸಂಘಟಿಸಲ್ಪಟ್ಟಿರುವ ಇರುವಿಕೆಗಳಿಗೆ ನಾಮಪದಗಳು ಉಲ್ಲೇಖಿಸಲ್ಪಡುತ್ತವೆ ಎಂಬುದನ್ನು ಇಂಥ ಸಾಮಾನ್ಯ ನಾಮಪದಗಳ ಅಸ್ತಿತ್ವವು ನಿರೂಪಿಸುತ್ತದೆ. ಆದರೆ ಅಭಿವ್ಯಕ್ತಿಗಳ ಇತರ ಬಗೆಗಳೂ ಸಹ ಇಂಥ ವ್ಯವಸ್ಥೆಯುಳ್ಳ ಜೀವಿವರ್ಗೀಕರಣದ ಸಂಬಂಧಗಳಾಗಿ ವ್ಯವಸ್ಥೆಗೊಳಿಸಲ್ಪಟ್ಟಿವೆ. ಉದಾಹರಣೆಗೆ, ಸುತ್ತಾಡು , ಅಡ್ಡಾಡು , ದಾಪುಗಾಲು ಹಾಕು , ಮತ್ತು ಹೆಜ್ಜೆಹಾಕು ಇವೇ ಮೊದಲಾದ ಕ್ರಿಯಾಪದಗಳು ಹೆಚ್ಚು ಸಾಮಾನ್ಯವಾದ ನಡೆ ಗಳಾಗಿರುವುದಕ್ಕಿಂತ ಹೆಚ್ಚು ನಿಶ್ಚಿತವಾದ ಪದಗಳಾಗಿವೆ. ಮೇಲಾಗಿ, ನಡೆ ಎಂಬುದು ಚಲಿಸು ಎಂಬ ಕ್ರಿಯಾಪದಕ್ಕಿಂತ ಹೆಚ್ಚು ನಿಶ್ಚಿತವಾಗಿದ್ದರೆ, ಚಲಿಸು ಎಂಬುದು ಅನುಕ್ರಮವಾಗಿ, ಬದಲಾಯಿಸು ಎಂಬುದಕ್ಕಿಂತ ಕಡಿಮೆ ಸಾಮಾನ್ಯವಾಗಿದೆ. ಆದರೆ ನಾಮಪದಗಳು ಮತ್ತು ಕ್ರಿಯಾಪದಗಳನ್ನು ವ್ಯಾಖ್ಯಾನಿಸಲು ಇಂಥ ಜೀವಿವರ್ಗೀಕರಣದ ಸಂಬಂಧಗಳನ್ನು ಬಳಸಿಕೊಳ್ಳಬಹುದು ಎಂಬುದು ಅಸಂಭವವಾಗಿದೆ. ಉದಾಹರಣೆಗೆ, ಬದಲಾವಣೆಗಳು ಅಥವಾ ಸ್ಥಿತಿಗಳಿಗೆ ಉಲ್ಲೇಖಿಸಲ್ಪಡುವ ಪದಗಳಾಗಿ ಕ್ರಿಯಾಪದಗಳನ್ನು ನಾವು ವ್ಯಾಖ್ಯಾನ ಮಾಡಲಾಗುವುದಿಲ್ಲ; ಏಕೆಂದರೆ, ಬದಲಾವಣೆ ಮತ್ತು ಸ್ಥಿತಿ ಎಂಬ ನಾಮಪದಗಳು ಪ್ರಾಯಶಃ ಇಂಥ ವಸ್ತುಗಳಿಗೆ ಉಲ್ಲೇಖಿಸಲ್ಪಡುತ್ತವೆಯಾದರೂ, ಅವಶ್ಯವಾಗಿ ಅವು ಕ್ರಿಯಾಪದಗಳಲ್ಲ. ಅದೇ ರೀತಿಯಲ್ಲಿ, ಆಕ್ರಮಣ , ಭೇಟಿ , ಮತ್ತು ಕುಸಿತ ಇಂಥ ನಾಮಪದಗಳು, ಮಾಡಲಾಗಿರುವ ಅಥವಾ ಸಂಭವಿಸಿರುವ ವಸ್ತುಗಳನ್ನು ಉಲ್ಲೇಖಿಸುತ್ತವೆ. ವಾಸ್ತವವಾಗಿ, ಒಂದು ಪ್ರಭಾವೀ ಸಿದ್ಧಾಂತವು ಹೇಳುವ ಪ್ರಕಾರ, ಕೊಲ್ಲು ಅಥವಾ ಸಾಯಿ ಎಂಬಂಥ ಕ್ರಿಯಾಪದಗಳು ಘಟನೆಗಳನ್ನು[][] ಉಲ್ಲೇಖಿಸುತ್ತವೆ; ಇದು ನಾಮಪದಗಳಾಗಿ ಉಲ್ಲೇಖಿಸಲ್ಪಡಬೇಕಾದ ವಸ್ತುಗಳ ವರ್ಗಗಳ ಪೈಕಿ ಒಂದಾಗುತ್ತದೆ.

ಇಲ್ಲಿ ಮಂಡಿಸಲಾಗುತ್ತಿರುವ ಅಂಶದ ಅರ್ಥ ಕ್ರಿಯಾಪದಗಳ ಈ ದೃಷ್ಟಿಕೋನವು ತಪ್ಪು ಎಂದಲ್ಲ, ಆದರೆ ಅದರ ಬದಲಿಗೆ ಇದು ಹೇಳುವುದೇನೆಂದರೆ, ಕ್ರಿಯಾಪದಗಳ ಈ ಲಕ್ಷಣವು ಈ ವರ್ಗದ ಒಂದು ವ್ಯಾಖ್ಯಾನ ಕ್ಕೆ ಸಂಬಂಧಿಸಿದ ಒಂದು ಕಳಪೆ ಆಧಾರವಾಗಿದೆ. ಚಕ್ರಗಳನ್ನು ಹೊಂದಿರುವುದರ ಲಕ್ಷಣವು ಕಾರುಗಳ ವ್ಯಾಖ್ಯಾನಕ್ಕೆ (ಚಕ್ರಗಳನ್ನು ಹೊಂದಿರುವ ಕೆಲವು ವಸ್ತುಗಳು, ಉದಾಹರಣೆಗೆ ಬಹುಪಾಲು ಸೂಟ್‌ಕೇಸ್‌‌ಗಳು ಅಥವಾ ಒಂದು ಜಂಬೋ ಜೆಟ್‌‌, ಇವು ಕಾರುಗಳಲ್ಲ) ಸಂಬಂಧಿಸಿದ ಒಂದು ಕಳಪೆ ಆಧಾರವಾಗಿ ಮಾರ್ಪಡುವುದನ್ನು ಇದಕ್ಕೆ ಹೋಲಿಸಬಹುದಾಗಿದೆ. ಇದೇ ರೀತಿಯಲ್ಲಿ, ಹಳದಿ ಅಥವಾ ಕಷ್ಟವಾದ ಎಂಬಂಥ ಗುಣವಾಚಕಗಳು ಗುಣಗಳನ್ನು ಉಲ್ಲೇಖಿಸುತ್ತವೆ ಎಂದು ಭಾವಿಸಲ್ಪಟ್ಟಿರಬಹುದು, ಮತ್ತು ಹೊರಗಡೆ ಅಥವಾ ಮಹಡಿಯ ಮೇಲೆ ಎಂಬಂಥ ಕ್ರಿಯಾವಿಶೇಷಣಗಳು ಸ್ಥಳಗಳನ್ನು ಉಲ್ಲೇಖಿಸುವಂತೆ ಕಾಣಬಹುದು. ಇವೂ ಸಹ ನಾಮಪದಗಳಿಂದ ಉಲ್ಲೇಖಿಸಲ್ಪಡುವ ವಸ್ತುಗಳ ಬಗೆಗಳಲ್ಲಿ ಸೇರಿವೆ. ಆದರೆ ಕ್ರಿಯಾಪದಗಳು, ಗುಣವಾಚಕಗಳು ಮತ್ತು ಕ್ರಿಯಾವಿಶೇಷಣಗಳು ನಾಮಪದಗಳಲ್ಲ, ಮತ್ತು ನಾಮಪದಗಳು ಕ್ರಿಯಾಪದಗಳು, ಗುಣವಾಚಕಗಳು ಅಥವಾ ಕ್ರಿಯಾವಿಶೇಷಣಗಳಲ್ಲ. ಈ ಬಗೆಯ ವ್ಯಾಖ್ಯಾನಗಳು ವಾಸ್ತವವಾಗಿ ನಾಮಪದಗಳು, ಕ್ರಿಯಾಪದಗಳು ಮತ್ತು ಗುಣವಾಚಕಗಳು ಅಂದರೆ ಏನು ಎಂಬುದರ ಕುರಿತಾದ ಮಾತಾಡುವವರ ಪೂರ್ವಭಾವಿ ಅಂತರ್ಬೋಧೆಯ ಜ್ಞಾನವನ್ನು ನೆಚ್ಚಿಕೊಂಡಿರುತ್ತವೆ. ಆದ್ದರಿಂದ ಇದನ್ನು ಮತ್ತು ಇದಕ್ಕಿಂತ ಹೆಚ್ಚಿನ ಯಾವುದನ್ನೂ ನಿಜವಾಗಿ ಸೇರಿಸುವುದು ಬೇಡ ಎಂದು ಕೆಲವರು ವಾದಿಸಬಹುದು. ಇಂಥ ವಸ್ತುಗಳ ಕುರಿತಾಗಿ ಮಾತಾಡುವವರು ಹೊಂದಿರುವ ಅಂತರ್ಬೋಧೆಯ ಜ್ಞಾನವು ಸಂಭವನೀಯವಾಗಿ ತೋರುವಂತೆ ಔಪಚಾರಿಕ ಮಾನದಂಡಗಳ ಮೇಲೆ ಆಧರಿಸಲ್ಪಟ್ಟಿರಬಹುದು. ಮೇಲೆ ನಮೂದಿಸಲಾದ ಇಂಗ್ಲಿಷ್‌ ನಾಮಪದಗಳ ಸಾಂಪ್ರದಾಯಿಕ ವ್ಯಾಕರಣಬದ್ಧವಾದ ವ್ಯಾಖ್ಯಾನವು ಈ ಔಪಚಾರಿಕ ಮಾನದಂಡಗಳಲ್ಲಿ ಸೇರಿದೆ.

ಗುರುತಿನ ಮಾನದಂಡಗಳೊಂದಿಗಿನ ಆಖ್ಯಾತಗಳು

[ಬದಲಾಯಿಸಿ]

ಟೆಂಪ್ಲೇಟು:Unclear section ಪೀಟರ್‌ ಥಾಮಸ್‌ ಗೀಚ್‌ ಎಂಬ ಓರ್ವ ಬ್ರಿಟಿಷ್‌ ತರ್ಕಶಾಸ್ತ್ರಜ್ಞ ನಾಮಪದಗಳ ಕುರಿತಾದ ಒಂದು ಹೆಚ್ಚು ಸೂಕ್ಷ್ಮವಾದ, ಶಬ್ದಾರ್ಥಕ್ಕೆ ಸಂಬಂಧಿಸಿದ ವ್ಯಾಖ್ಯಾನವನ್ನು ಪ್ರಸ್ತಾವಿಸಿದ.[] "ಅದೇ" ಎಂಬಂಥ ಗುಣವಾಚಕಗಳು ನಾಮಪದಗಳನ್ನು ಮಾರ್ಪಾಡು ಮಾಡಬಲ್ಲವೇ ಹೊರತು, ಕ್ರಿಯಾಪದಗಳು ಅಥವಾ ಗುಣವಾಚಕಗಳ ರೀತಿಯ ಪದವರ್ಗ ವಾಚಕಗಳ ಇತರ ಬಗೆಗಳನ್ನಲ್ಲ ಎಂಬುದನ್ನು ಅವನು ಪ್ರಸ್ತಾವಿಸಿದ. ಅದೊಂದೇ ಅಲ್ಲ, ಆದರೆ ಕ್ರಿಯಾಪದಗಳು ಮತ್ತು ಗುಣವಾಚಕಗಳನ್ನು ಮಾರ್ಪಾಡು ಮಾಡಬಲ್ಲ ಅದೇ ರೀತಿಯ ಅರ್ಥದೊಂದಿಗಿನ ಯಾವುದೇ ಇತರ ಅಭಿವ್ಯಕ್ತಿಗಳು ಅಲ್ಲಿ ಇದ್ದಂತೆ ಕಾಣುವುದಿಲ್ಲ. ಈ ಕೆಳಗಿನ ಉದಾಹರಣೆಗಳನ್ನು ಪರಿಗಣಿಸಿ:

ವ್ಯಾಕರಣಬದ್ಧವಾದದ್ದು: ಜಾನ್‌ ಮತ್ತು ಬಿಲ್‌‌ ಅದೇ ಹೋರಾಟ ದಲ್ಲಿ ಭಾಗವಹಿಸಿದರು.
ವ್ಯಾಕರಣ ಸಮ್ಮತವಲ್ಲದ್ದು: *ಜಾನ್‌ ಮತ್ತು ಬಿಲ್‌‌ ಅದೇ ರೀತಿಯಲ್ಲಿ ಹೋರಾಡಿದರು.

ಅದೇ ರೀತಿಯಲ್ಲಿ ಎಂಬ ಯಾವುದೇ ಇಂಗ್ಲಿಷ್‌ ಕ್ರಿಯಾವಿಶೇಷಣವೂ ಅಸ್ತಿತ್ವದಲ್ಲಿಲ್ಲ. ಆದಾಗ್ಯೂ, ಝೆಕ್‌ನಂಥ ಇತರ ಕೆಲವು ಭಾಷೆಗಳಲ್ಲಿ, ಅದೇ ರೀತಿಯಲ್ಲಿ ಎಂಬುದಕ್ಕೆ ಅನುರೂಪವಾಗಿರುವ ಕ್ರಿಯಾವಿಶೇಷಣಗಳಿವೆ. ಆದ್ದರಿಂದ, ಝೆಕ್ ಭಾಷೆಯಲ್ಲಿ‌, ಕೊನೆಯ ವಾಕ್ಯದ ಭಾಷಾಂತರವು ಚೆನ್ನಾಗಿರುತ್ತದೆ; ಆದಾಗ್ಯೂ, ಜಾನ್‌ ಮತ್ತು ಬಿಲ್‌‌ ಅದೇ ರೀತಿಯಲ್ಲಿ ಹೋರಾಡಿದರು ಎಂದು ಅದು ಅರ್ಥನೀಡುತ್ತದೆಯೇ ವಿನಃ, ಅದೇ ಹೋರಾಟ ದಲ್ಲಿ ಅವರು ಭಾಗವಹಿಸಿದರು ಎಂಬಂಥ ಅರ್ಥವನ್ನಲ್ಲ. ಒಂದು ವೇಳೆ ನಾಮಪದಗಳು ಗುರುತಿನ ಮಾನದಂಡಗಳೊಂದಿಗೆ ತಾರ್ಕಿಕ ಆಖ್ಯಾತಗಳನ್ನು ಸೂಚಿಸಿದರೆ, ಇದನ್ನು ನಾವು ವಿವರಿಸಬಹುದು ಎಂಬುದನ್ನು ಗೀಚ್‌ ಪ್ರಸ್ತಾವಿಸಿದ. ಉದಾಹರಣೆಗೆ 1ನೇ ಸಮಯದಲ್ಲಿರುವ x ಎಂಬ ವ್ಯಕ್ತಿಯು , 2ನೇ ಸಮಯದಲ್ಲಿರುವ y ಎಂಬ ವ್ಯಕ್ತಿಯಂತಿರುವ ಅದೇ ವ್ಯಕ್ತಿಯಾಗಿದ್ದಾನೆ ಎಂದು ತೀರ್ಮಾನಿಸಲು ಗುರುತಿನ ಮಾನದಂಡವೊಂದು ನಮಗೆ ಅನುವುಮಾಡಿಕೊಡುತ್ತದೆ. ವಿಭಿನ್ನ ನಾಮಪದಗಳು ವಿಭಿನ್ನವಾದ ಗುರುತಿನ ಮಾನದಂಡಗಳನ್ನು ಹೊಂದಿರಬಹುದಾಗಿದೆ. ಇದರ ಕುರಿತಾದ ಒಂದು ಚಿರಪರಿಚಿತ ಉದಾಹರಣೆಯನ್ನು ಗುಪ್ತ ನೀಡಿದ್ದಾರೆ:[]

ನ್ಯಾಷನಲ್‌ ಏರ್‌ಲೈನ್ಸ್‌‌ 1979ರಲ್ಲಿ 2 ದಶಲಕ್ಷ ಪ್ರಯಾಣಿಕರನ್ನು ಸಾಗಣೆ ಮಾಡಿತು.
ನ್ಯಾಷನಲ್‌ ಏರ್‌ಲೈನ್ಸ್‌‌ 1979ರಲ್ಲಿ (ಕನಿಷ್ಟ ಪಕ್ಷ) 2 ದಶಲಕ್ಷ ವ್ಯಕ್ತಿಗಳನ್ನು ಸಾಗಣೆಮಾಡಿತು.

ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಎಲ್ಲಾ ಪ್ರಯಾಣಿಕರೂ ವ್ಯಕ್ತಿಗಳೇ ಆಗಿರುವುದರಿಂದ, ಮೇಲೆ ನೀಡಲಾಗಿರುವ ಕೊನೆಯ ವಾಕ್ಯವು ಮೊದಲನೆಯ ವಾಕ್ಯದಿಂದ ತಾರ್ಕಿಕವಾಗಿ ಅನುಸರಿಸಿಕೊಂಡು ಬರಬೇಕಾಗುತ್ತದೆ. ಆದರೆ ಅದು ಹಾಗೆ ಮಾಡುವುದಿಲ್ಲ. ಉದಾಹರಣೆಗೆ, 1979ರಲ್ಲಿ ನ್ಯಾಷನಲ್‌ ಏರ್‌ಲೈನ್ಸ್‌ನೊಂದಿಗೆ ಪ್ರಯಾಣ ಮಾಡಿದ ಪ್ರತಿ ವ್ಯಕ್ತಿಯೂ ಅವರೊಂದಿಗೆ ಸರಾಸರಿಯಾಗಿ ಎರಡು ಬಾರಿ ಪ್ರಯಾಣ ಮಾಡಿದ್ದಾನೆ ಎಂಬುದನ್ನು ಊಹಿಸಿಕೊಳ್ಳುವುದು ಸುಲಭ. ಆ ಸನ್ನಿವೇಶದಲ್ಲಿ, ಸದರಿ ವಾಯುಯಾನ ಸಂಸ್ಥೆಯು 2 ದಶಲಕ್ಷ ಪ್ರಯಾಣಿಕರನ್ನು ಸಾಗಣೆ ಮಾಡಿದೆಯಾದರೂ ಅದು ಸಾಗಣೆ ಮಾಡಿರುವುದು ಕೇವಲ 1 ದಶಲಕ್ಷ ವ್ಯಕ್ತಿಗಳನ್ನು ಎಂದು ಯಾರಾದರೂ ಹೇಳಬಹುದು. ಈ ರೀತಿಯಲ್ಲಿ, ನಾವು ಪ್ರಯಾಣಿಕರನ್ನು ಎಣಿಕೆ ಮಾಡುವ ರೀತಿಯು, ನಾವು ವ್ಯಕ್ತಿಗಳನ್ನು ಎಣಿಕೆ ಮಾಡುವ ರೀತಿಯಲ್ಲೇ ಇರಬೇಕು ಎಂದೇನೂ ಇಲ್ಲ. ಇದನ್ನು ಬೇರೆ ರೀತಿಯಲ್ಲಿ ಇಡೋಣ: ಎರಡು ವಿಭಿನ್ನ ಸಮಯಗಳಲ್ಲಿ, ನೀವು ಎಂಬ ಪದವು ಎರಡು ಪ್ರತ್ಯೇಕ ಪ್ರಯಾಣಿಕರಿಗೆ ಸಂಬಂಧಿಸಿರಬಹುದು, ನೀವು ಒಂದೇ ವ್ಯಕ್ತಿ ಮತ್ತು ಅದೇ ವ್ಯಕ್ತಿಯಾಗಿದ್ದರೂ ಕೂಡಾ. ಗುರುತಿನ ಮಾನದಂಡಗಳ ಒಂದು ಕರಾರುವಾಕ್ಕಾದ ವ್ಯಾಖ್ಯಾನಕ್ಕಾಗಿ, ನೋಡಿ: ಗುಪ್ತ.[]

ಮೂಲಮಾದರಿಯ ಸಂಬಂಧ ಸೂಚಕ ಅಭಿವ್ಯಕ್ತಿಗಳು

[ಬದಲಾಯಿಸಿ]

ಟೆಂಪ್ಲೇಟು:Unclear section ನಾಮಪದಗಳು ಮೂಲಮಾದರಿಯ ಸಂಬಂಧ ಸೂಚಕ ಗಳಾಗಿವೆ ಎಂಬುದು ನಾಮಪದಗಳ ಶಬ್ದಾರ್ಥಕ್ಕೆ ಸಂಬಂಧಿಸಿದ ಮತ್ತೊಂದು ವ್ಯಾಖ್ಯಾನವಾಗಿದೆ.[]

ಇತ್ತೀಚೆಗೆ, ಮಾರ್ಕ್‌ ಬೇಕರ್‌[] ಎಂಬಾತ ಪ್ರಸ್ತಾವನೆಯೊಂದನ್ನು ಮಂಡಿಸಿದ್ದು, ಗುರುತಿನ ಮಾನದಂಡಗಳ ಪರಿಭಾಷೆಯಲ್ಲಿ ಗೀಚ್‌ ನೀಡಿರುವ ನಾಮಪದಗಳ ವ್ಯಾಖ್ಯಾನವು, ನಾಮಪದಗಳ ವಿಶಿಷ್ಟ ಲಕ್ಷಣಗಳನ್ನು ವಿವರಿಸಲು ನಮಗೆ ಅವಕಾಶಮಾಡಿಕೊಡುತ್ತದೆ ಎಂದು ತಿಳಿಸಿದ್ದಾನೆ. ಅವನು ವಾದಿಸುವ ಪ್ರಕಾರ, ನಾಮಪದಗಳು (ಅ-)ನಿರ್ದೇಶಕ ಗುಣವಾಚಿಗಳು ಮತ್ತು ಸಂಖ್ಯಾವಾಚಕಗಳೊಂದಿಗೆ ಜೊತೆಯಾಗಿ-ಸಂಭವಿಸಬಲ್ಲವು, ಮತ್ತು ಅವು ಮೂಲಮಾದರಿಯ ಸಂಬಂಧ ಸೂಚಕ ಗಳಾಗಿವೆ; ಏಕೆಂದರೆ ಅವು ಗುರುತಿನ ಮಾನದಂಡಗಳನ್ನು ಒದಗಿಸುವ ಆ ಎಲ್ಲಾ ಮತ್ತು ಏಕೈಕ ಪದವರ್ಗ ವಾಚಕಗಳಾಗಿವೆ. ಬೇಕರ್‌ನ ಪ್ರಸ್ತಾವಗಳು ಸಾಕಷ್ಟು ಹೊಸತಾಗಿವೆಯಾದ್ದರಿಂದ, ಭಾಷಾಶಾಸ್ತ್ರಜ್ಞರು ಇನ್ನೂ ಅವುಗಳ ಅರ್ಹತೆಯನ್ನು ನಿರ್ಣಯಿಸುತ್ತಿದ್ದಾರೆ.

ಇಂಗ್ಲಿಷ್‌ನಲ್ಲಿನ ನಾಮಪದಗಳ ವರ್ಗೀಕರಣ

[ಬದಲಾಯಿಸಿ]

ಅಂಕಿತನಾಮಗಳು ಮತ್ತು ರೂಢನಾಮಗಳು

[ಬದಲಾಯಿಸಿ]
ವೈಯಕ್ತಿಕ ಹೆಸರು ಇಲ್ಲಿಗೆ ಮರುನಿರ್ದೇಶಿಸುತ್ತದೆ. ಭಾಷಾ ಪರಿಕಲ್ಪನೆಯ ಪದ್ಧತಿಗಾಗಿ, ನೋಡಿ: ವೈಯಕ್ತಿಕ ಹೆಸರು (ಪದ್ಧತಿ).

ಅಂಕಿತನಾಮಗಳು (ಇವು ವೈಯಕ್ತಿಕ ಹೆಸರುಗಳು ಎಂದೂ ಕರೆಯಲ್ಪಡುತ್ತವೆ) ನಾಮಪದಗಳಾಗಿದ್ದು, ಅನನ್ಯ ಇರುವಿಕೆಗಳನ್ನು (ಲಂಡನ್‌ , ಜುಪಿಟರ್‌ ಅಥವಾ ಜಾನಿ ಈ ರೀತಿಯದು) ಪ್ರತಿನಿಧಿಸುತ್ತವೆ. ಇರುವಿಕೆಗಳ ಒಂದು ವರ್ಗವನ್ನು (ನಗರ , ಗ್ರಹ ಅಥವಾ ವ್ಯಕ್ತಿ ಈ ರೀತಿಯದು) ವಿವರಿಸುವ ರೂಢನಾಮಗಳಿಂದ ಅಂಕಿತನಾಮಗಳು ಪ್ರತ್ಯೇಕಿಸಲ್ಪಟ್ಟಿರುತ್ತವೆ.[] ಅಂಕಿತನಾಮಗಳು ಸಾಮಾನ್ಯವಾಗಿ ಒಂದು ಗುಣವಾಚಿಯನ್ನಾಗಲೀ ಅಥವಾ ಸೀಮಿತಗೊಳಿಸುವ ಇತರ ವಿಶೇಷಣವನ್ನಾಗಲೀ (ಯಾವುದೇ ಅಥವಾ ಕೆಲವು ಈ ರೀತಿಯದು) ಮುಂದಿಟ್ಟುಕೊಂಡು ಬರುವುದಿಲ್ಲ, ಮತ್ತು ಪದ ಅಥವಾ ವಾಕ್ಯಾಂಗವು ಹೊಂದಬಹುದಾದ ಯಾವುದೇ ವಿವರಣಾತ್ಮಕ ಅರ್ಥಕ್ಕೆ ಸಂಬಂಧಿಸದೆಯೇ ಒಂದು ನಿರ್ದಿಷ್ಟ ವ್ಯಕ್ತಿ, ಸ್ಥಳ, ಅಥವಾ ವಸ್ತುವನ್ನು ಸೂಚಿಸಲು ಅಂಕಿತನಾಮಗಳನ್ನು ಬಳಸಲಾಗುತ್ತದೆ. ಅಂಕಿತನಾಮದ ಮೊದಲಕ್ಷರದಲ್ಲಿ ದೊಡ್ಡಕ್ಷರವನ್ನು ಬಳಸುವಿಕೆಯ ಅರ್ಥವು ಒಂದು ಸೂಚ್ಯ ಸಂದರ್ಭದೊಳಗೆ ಅನನ್ಯತೆಯಾಗಿದೆ, ಅಂದರೆ, ಒಂದು ಸೂಚ್ಯ ಸಂದರ್ಭದೊಳಗಡೆ ನಿದರ್ಶನವು ಅನನ್ಯವಾಗಿದ್ದಾಗ, ಒಂದು ಸಾಮಾನ್ಯ ಬಗೆಯ ನಿದರ್ಶನವೊಂದಕ್ಕೆ ಇದು ಒಂದು ಹೆಸರನ್ನು ಒದಗಿಸುತ್ತದೆ. ಆದ್ದರಿಂದ ಸಂದರ್ಭದ ವರ್ಗಾವಣೆಗಳು, ನಂತರ ಚರ್ಚಿಸಲಾಗಿರುವಂತೆ, ಇದರ ಮೇಲೆ ಪರಿಣಾಮ ಬೀರಬಹುದು (ನೋಡಿ: ರೂಢ ಮತ್ತು ಅಂಕಿತ ಅರ್ಥಗಳ ಅಡ್ಡಹಾಯುವಿಕೆಗಳು).

ಇಂಗ್ಲಿಷ್‌ ಮತ್ತು ಲ್ಯಾಟಿನ್‌ ಅಕ್ಷರಮಾಲೆಯನ್ನು ಬಳಸುವ ಬಹುಪಾಲು ಇತರ ಭಾಷೆಗಳಲ್ಲಿ, ಸಾಮಾನ್ಯವಾಗಿ ಅಂಕಿತನಾಮಗಳ ಮೊದಲ ಅಕ್ಷರವು ದೊಡ್ಡಕ್ಷರವಾಗಿ ಬರೆಯಲ್ಪಟ್ಟಿರುತ್ತವೆ. ಬಹುಪದದ ಅಂಕಿತನಾಮಗಳ ಬಹುಪಾಲು ಮೂಲಾಂಶಗಳು ಅಥವಾ ಪದಗಳ ಮೊದಲಕ್ಷರಗಳು ದೊಡ್ಡಕ್ಷರಗಳಾಗಿವೆಯೇ ಇಲ್ಲವೇ (ಉದಾಹರಣೆಗೆ, American English House of Representatives ) ಅಥವಾ ಕೇವಲ ಆರಂಭಿಕ ಮೂಲಾಂಶವು ಅಥವಾ ಪದದ ಮೊದಲಕ್ಷರವು ದೊಡ್ಡಕ್ಷರವಾಗಿದೆಯೇ (ಉದಾಹರಣೆಗೆ, Slovenian Državni zbor 'National Assembly') ಎಂಬುದರಲ್ಲಿ ಭಾಷೆಗಳು ಭಿನ್ನವಾಗುತ್ತಾ ಹೋಗುತ್ತವೆ. ಜರ್ಮನ್‌‌ ಭಾಷೆಯಲ್ಲಿ, ಎಲ್ಲಾ ಬಗೆಗಳ ನಾಮಪದಗಳು ದೊಡ್ಡಕ್ಷರವಾಗಿ ಬರೆಯಲ್ಪಟ್ಟಿರುತ್ತವೆ. ಎಲ್ಲಾ ನಾಮಪದಗಳ ಮೊದಲಕ್ಷರವನ್ನು ದೊಡ್ಡಕ್ಷರದಲ್ಲಿ ಬರೆಯುವ ರೂಢಿಯು ಇಂಗ್ಲಿಷ್‌ನಲ್ಲಿ ಮುಂಚಿತವಾಗಿ ಬಳಕೆಯಲ್ಲಿತ್ತು, ಆದರೆ ಸುಮಾರು 1800ನೇ ಇಸವಿಯ ಹೊತ್ತಿಗೆ ಅದು ಕೊನೆಗೊಂಡಿತು.[ಸೂಕ್ತ ಉಲ್ಲೇಖನ ಬೇಕು] ಅಮೆರಿಕಾದಲ್ಲಿ, ದೊಡ್ಡಕ್ಷರದ ಬಳಸುವಿಕೆಯಲ್ಲಿನ ಬದಲಾವಣೆಯನ್ನು ಹಲವಾರು ಗಮನಾರ್ಹ ದಸ್ತಾವೇಜುಗಳಲ್ಲಿ ದಾಖಲಿಸಲಾಗಿದೆ. ಸ್ವಾತಂತ್ರ್ಯದ ಘೋಷಣೆಯ (1776) ಅಂತ್ಯಭಾಗ (ಆದರೆ ಆರಂಭವಲ್ಲ) ಹಾಗೂ ಸಂವಿಧಾನದ (1787) ಎಲ್ಲಾ ಭಾಗವು ಹೆಚ್ಚೂಕಮ್ಮಿ ಎಲ್ಲಾ ನಾಮಪದಗಳ ಮೊದಲಕ್ಷರಗಳು ದೊಡ್ಡಕ್ಷರವಾಗಿ ಬರೆದಿರುವುದನ್ನು ತೋರಿಸುತ್ತವೆ, ಹಕ್ಕುಗಳ ಮಸೂದೆಯು (1789) ಕೆಲವೊಂದು ರೂಢನಾಮಗಳ ಮೊದಲಕ್ಷರಗಳನ್ನು ದೊಡ್ಡಕ್ಷರದಲ್ಲಿ ಬರೆದಿದೆಯಾದರೂ, ಅವುಗಳ ಪೈಕಿ ಬಹುಪಾಲನ್ನು ಅಲ್ಲ, ಮತ್ತು ಹದಿಮೂರನೇ ಸಾಂವಿಧಾನಿಕ ತಿದ್ದುಪಡಿಯು (1865) ಕೇವಲ ಅಂಕಿತನಾಮಗಳ ಮೊದಲಕ್ಷರಗಳನ್ನು ದೊಡ್ಡಕ್ಷರವಾಗಿಸಿದೆ.

ರೂಢ ಮತ್ತು ಅಂಕಿತ ಅರ್ಥಗಳ ಅಡ್ಡಹಾಯುವಿಕೆಗಳು

[ಬದಲಾಯಿಸಿ]

ಕೆಲವೊಮ್ಮೆ ಒಂದೇ ಪದವು ಸಂದರ್ಭವನ್ನು ಅವಲಂಬಿಸಿ ಒಂದು ರೂಢನಾಮ ಮತ್ತು ಒಂದು ಅಂಕಿತನಾಮ ಹೀಗೆ ಎರಡೂ ರೀತಿಯಲ್ಲಿಯೂ ಕಾರ್ಯನಿರ್ವಹಿಸಬಲ್ಲದು. ಈ ತತ್ತ್ವದ ಎರಡು ರೂಪಾಂತರಗಳನ್ನು ವಿಂಗಡಿಸಬಹುದಾದರೂ, ಎರಡೂ ಬಗೆಗಳ ನಿದರ್ಶನಗಳನ್ನು ಉಲ್ಲೇಖಿಸಲು ವಾಸ್ತವಿಕ ಪ್ರಪಂಚವು ಬಳಸುವ ಹಣೆಪಟ್ಟಿಗಳಿಂದ ಈ ವಿಂಗಡಣೆಯು ಮಸುಕುಗೊಳಿಸಲ್ಪಟ್ಟಿದೆ. ಸಾರ್ವತ್ರಿಕವಾಗಿ ಸಮ್ಮತಿಸಲ್ಪಟ್ಟ ಯಾವುದೇ ಹೆಸರುಗಳನ್ನು (ಅಂದರೆ, ಯಾವುದೇ ಪ್ರಮಾಣಕವಾಗಿಸಿದ ಅಧಿಭಾಷೆಯನ್ನು) ಅವು ಹೊಂದಿಲ್ಲ, ಆದರೆ "ದೊಡ್ಡಕ್ಷರ ನಾಮಕ"[] ಮತ್ತು "ನಿಶ್ಚಿತ ಸೂಚಕ"[೧೦] ಎಂಬ ಹೆಸರುಗಳು ಒಂದಷ್ಟು ಚಲಾವಣೆಯನ್ನು ಹೊಂದಿವೆ.

ದೊಡ್ಡಕ್ಷರ ನಾಮಕಗಳು
[ಬದಲಾಯಿಸಿ]

ದೊಡ್ಡಕ್ಷರ ನಾಮಕ ಎಂಬುದು ಒಂದು ಪದವಾಗಿದ್ದು, ಅದರ ಮೊದಲಕ್ಷರವನ್ನು ದೊಡ್ಡಕ್ಷರವಾಗಿ ಬರೆದಾಗ ಅದರ ಅರ್ಥವು (ಮತ್ತು ಕೆಲವೊಮ್ಮೆ ಉಚ್ಚರಣೆಯು) ಬದಲಾಗುತ್ತದೆ. ಇದು ಸಮಾನ ನಾಮಕದ ಒಂದು ಬಗೆಯಾಗಿದೆ. ಮೊದಲಕ್ಷರವನ್ನು ದೊಡ್ಡಕ್ಷರವಾಗಿ ಹೊಂದಿರುವ ರೂಪಾಂತರದ ಅರ್ಥವು, ಕೆಲವೊಮ್ಮೆ ಸಣ್ಣ ಅಕ್ಷರದ ರೂಪಾಂತರದ ಅರ್ಥದ ಒಂದು ವಿಶೇಷ ನಿದರ್ಶನವಾಗಿರಬಹುದು, ಅಥವಾ ಇದು ನಾಮಸೂಚಕವಾದ ರೀತಿಯಲ್ಲಿ ಅದಕ್ಕೆ ಸಂಬಂಧಿಸಿರಬಹುದು. ಉದಾಹರಣೆಗೆ:

ಮೊದಲಕ್ಷರವನ್ನು ದೊಡ್ಡಕ್ಷರವಾಗಿ ಹೊಂದಿರುವ ಪದ ಸಣ್ಣಕ್ಷರವಾಗಿ ಬರೆದಿರುವ ಪದ ಪದಗಳ ನಡುವಿನ ಸಂಬಂಧ
ಕ್ಯಾಥೊಲಿಕ್‌ [ರೋಮನ್‌ ಕ್ಯಾಥೊಲಿಕ್‌ ಚರ್ಚಿನದು] ಕ್ಯಾಥೊಲಿಕ್‌ [ಸಾರ್ವತ್ರಿಕ] ಒಂದು ವಿಶೇಷ ನಿದರ್ಶನವಾಗಿ ಮೊದಲನೆಯ ಪದವು ಎರಡನೆಯದರಿಂದ ರೂಢಿಗೆ ಬಂದಿತು
ಚೈನಾ [ದೇಶ] ಚೈನಾ [ಊಟದ ಮೇಜಿನ ಪರಿಕರ] ನಾಮದಾತಶೀಲತೆಯ ಮೂಲಕ ಎರಡನೆಯ ಪದವು ಮೊದಲನೆಯದಕ್ಕೆ ಸಂಬಂಧವನ್ನು ಹೊಂದಿದೆಯಾದರೂ, ಇಂಗ್ಲಿಷ್‌ಗೆ ಸಂಬಂಧಪಟ್ಟ ಪದಗಳ ಭಾಷಾಧ್ಯಯನದ ಪಥಗಳು ವಿಶಿಷ್ಟವಾಗಿ ನೇರವಾದ ನಾಮಸೂಚಕ ಸಂಬಂಧವನ್ನು ಹೊಂದಿದವಾಗಿರಲಿಲ್ಲ[೧೧]
ಅಯಾನಿಕ್‌ [ವಾಸ್ತುಶಿಲ್ಪ ಶೈಲಿ] ಅಯಾನಿಕ್‌ [[[ಅಯಾನು]]ಗಳಿಗೆ ಸಂಬಂಧಿಸಿದ್ದು] ಸಂಬಂಧಿಸಿಲ್ಲ
ಜಾಬ್‌ [ಬೈಬಲ್ಲಿನ ಕಥಾನಾಯಕ] ಜಾಬ್‌ [ಉದ್ಯೋಗ] ಸಂಬಂಧಿಸಿಲ್ಲ
ಲಿಮಾ [ಪೆರುವಿನಲ್ಲಿನ ಒಂದು ನಗರ] ಲಿಮಾ [ಹುರುಳಿಯ ಒಂದು ಬಗೆ] ಎರಡನೆಯದು ಮೊದಲನೆಯದರಿಂದ ನಾಮಸೂಚಕವಾದ ರೀತಿಯಲ್ಲಿ ರೂಢಿಗೆ ಬಂದಿತು[೧೧][೧೨]
ಮಾರ್ಚ್‌ [ತಿಂಗಳು] ಮಾರ್ಚ್‌ [ಚಲಿಸುವ ಶೈಲಿ] ಸಂಬಂಧಿಸಿಲ್ಲ
ಪೋಲ್‌ [ಪೋಲೆಂಡ್‌ಗೆ ಸೇರಿದ ಓರ್ವ ವ್ಯಕ್ತಿ] ಪೋಲ್‌ [ಒಂದು ಉದ್ದನೆಯ ಸಲಾಕೆ] ಸಂಬಂಧಿಸಿಲ್ಲ
ಪೋಲಿಷ್‌ [ಪೋಲೆಂಡ್‌ನಿಂದ ಬಂದವರು] ಪಾಲಿಷ್‌ [ಕೆಲವು ವಸ್ತುಗಳಿಗೆ ಹೊಳಪುಂಟುಮಾಡಲು ಅವುಗಳ ಮೇಲೆ ಉಜ್ಜಲಾಗುವ ಒಂದು ಪೇಸ್ಟು (ಜಲಪಿಷ್ಠ)] ಸಂಬಂಧಿಸಿಲ್ಲ
ಸ್ವೀಡ್‌ [ಸ್ವೀಡನ್‌ನಿಂದ ಬಂದವರು] ಸ್ವೀಡ್‌ [ಒಂದು ಹಳದಿ ಟರ್ನಿಪ್‌ ಗಡ್ಡೆ] ಎರಡನೆಯದು ಮೊದಲನೆಯದರಿಂದ ರೂಢಿಗೆ ಬಂದಿತು
ನಿಶ್ಚಿತ ಸೂಚಕಗಳು
[ಬದಲಾಯಿಸಿ]

ಸಾಮಾನ್ಯವಾಗಿ ರೂಢನಾಮಗಳಾಗಿದ್ದರೂ ಸುಲಭವಾಗಿ "ತಾತ್ಕಾಲಿಕ ಅಂಕಿತನಾಮ ಕರ್ತವ್ಯವನ್ನು ಸಲ್ಲಿಸಬಲ್ಲ" (ಅಥವಾ "ಸಂದರ್ಭೋಚಿತ ಅಂಕಿತನಾಮ ಕರ್ತವ್ಯ"ವನ್ನು ಸಲ್ಲಿಸಬಲ್ಲ) ಅನೇಕ ಪದಗಳು ಅಸ್ತಿತ್ವದಲ್ಲಿವೆ. ಇದಕ್ಕಿರುವ ಕೆಲವು ಉದಾಹರಣೆಗಳೆಂದರೆ: ದಲ್ಲಾಳಿ ಸಂಸ್ಥೆ, ವಿಶಾಲ ಬೀದಿ, ಅಗಲ ಹೆದ್ದಾರಿ, ಪೆಟ್ಟಿಗೆ, ಕಟ್ಟಡ, ಸಂಸ್ಥೆ, ಪ್ರಕರಣ, ಅಧ್ಯಾಯ, ನಗರ, ವರ್ಗ, ಕಾಲೇಜು, ದಿನ, ಆವೃತ್ತಿ, ಅಂತಸ್ತು, ದರ್ಜೆ, ಗುಂಪು, ಆಸ್ಪತ್ರೆ, ಮಟ್ಟ, ಕಚೇರಿ, ಪುಟ, ಖಂಡ, ಭಾಗ, ಹಂತ, ರಸ್ತೆ, ಶಾಲೆ, ವೇದಿಕೆ, ಮೆಟ್ಟಿಲು, ಬೀದಿ, ಬಗೆ, ವಿಶ್ವವಿದ್ಯಾಲಯ, ವಾರ. ಪ್ರತ್ಯೇಕಿಸುವಿಕೆಯೊಂದರ (ಅಂದರೆ, ಒಂದು ಸಾಮಾನ್ಯ ಬಗೆಯ ಒಂದು ನಿಶ್ಚಿತ ಪ್ರಕರಣ) ಒಂದು ನಿಶ್ಚಿತ ನಿದರ್ಶನಕ್ಕಾಗಿ ಹೆಸರೊಂದನ್ನು ಸೃಷ್ಟಿಸಲು, ಒಂದು ಸಂಖ್ಯೆ ಅಥವಾ ಇತರ ಪದದೊಂದಿಗೆ ರೂಢನಾಮವು ಜೋಡಿಯಾದಾಗ, ತಾತ್ಕಾಲಿಕ ಅಂಕಿತನಾಮ ಕರ್ತವ್ಯವು ಸಂಭವಿಸುತ್ತದೆ. ಆಗ ಇದು ಒಂದು "ನಿಶ್ಚಿತ ಸೂಚಕ" ಎಂದು ಉಲ್ಲೇಖಿಸಲ್ಪಡುತ್ತದೆ. ಉದಾಹರಣೆಗೆ:

  • ಮುಖ್ಯ ಕಟ್ಟಡದ ಮೂರನೇ ಮಹಡಿಯಲ್ಲಿ ಮೇರಿ ವಾಸಿಸುತ್ತಾಳೆ. (Mary lives on the third floor of the main building.) (ವಾಕ್ಯದುದ್ದಕ್ಕೂ ರೂಢನಾಮವು ಗ್ರಹಿಸುತ್ತದೆ)
  • ಮುಖ್ಯ ಕಟ್ಟಡದ ಮಹಡಿ 3ರಲ್ಲಿ ಮೇರಿ ವಾಸಿಸುತ್ತಾಳೆ. (Mary lives on Floor 3 of the Main Building.) (ಅದೇ ಮಾಹಿತಿಯ ವಿಷಯ, ಆದರೆ ವೈಯಕ್ತಿಕ ಹೆಸರುಗಳಾಗಿ ಅರಿಯಬಹುದಾದ ರೀತಿಯಲ್ಲಿ ಪುನಃ ರೂಪಿಸಲಾಗಿದೆ. ಪದದ ಮೊದಲಕ್ಷರವನ್ನು ದೊಡ್ಡಕ್ಷರವನ್ನಾಗಿಸುವುದನ್ನು ವ್ಯಾಪಿಸುವ ನಿಷ್ಕೃಷ್ಟತೆಯ ಅರಿವಿನ ವ್ಯತ್ಯಾಸವನ್ನು ಹೊರತುಪಡಿಸಿ, ಇಲ್ಲಿ ನೀತಿಸೂತ್ರಗಳ ಯಾವುದೇ ವ್ಯತ್ಯಾಸವಿಲ್ಲ. "ಸಾಮಾನ್ಯವಾಗಿ ಅರ್ಥೈಸಲ್ಪಟ್ಟ ನಮ್ಮ ಸಂದರ್ಭದೊಳಗೆ, ಉಲ್ಲೇಖಿಸಲ್ಪಡುತ್ತಿರುವ ಮುಖ್ಯ ಕಟ್ಟಡವು ಏಕೈಕ ಮುಖ್ಯ ಕಟ್ಟಡವಾಗಿದೆ" ಎಂಬ ಒಂದು ಸೂಚ್ಯವಾದ ಅರ್ಥವನ್ನು ಇದು ನೆಲೆಗೊಳಿಸುತ್ತದೆ. ಇದೊಂದು ಅನನ್ಯ ವಸ್ತುವಾಗಿದೆ [ನಮ್ಮ ಸಂದರ್ಭದ ಮಟ್ಟಿಗೆ ಸಂಬಂಧಿಸಿ ಹೇಳುವುದಾದರೆ].)
  • ನನ್ನ ಪುಸ್ತಕದ ಪುಟದಗುರುತು ಇಂಗ್ಲಿಷ್‌ ವಿಕಿಪೀಡಿಯಾದ ಮುಖ್ಯ ಪುಟದೆಡೆಗೆ (main page) ನನ್ನನ್ನು ಒಯ್ಯುತ್ತದೆ.
  • ಆ ಪುಟದ ವೈಯಕ್ತಿಕ ಹೆಸರು (proper name) ಏನು?
  • ಅದರ ಹೆಸರು ಮುಖ್ಯ ಪುಟ (Main Page).
  • ಕಡಲದಂಡೆಯ ರಸ್ತೆಯಲ್ಲಿ (beach road) ಸಂಜಯ್‌ ವಾಸಿಸುತ್ತಾನೆ [ಅದು ಕಡಲಿನ ಅಂಚಿನುದ್ದಕ್ಕೂ ಸಾಗುವ ರಸ್ತೆ]
  • ಬೀಚ್‌ ರಸ್ತೆಯಲ್ಲಿ (Beach Road) ಸಂಜಯ್‌ ವಾಸಿಸುತ್ತಾನೆ. ["ಬೀಚ್‌ ರಸ್ತೆ" (Beach Road) ಎಂಬ ವೈಯಕ್ತಿಕ ಹೆಸರಿನ ಪದಗಳ ಮೊದಲಕ್ಷರವನ್ನು ದೊಡ್ಡಕ್ಷರದಲ್ಲಿ ಬರೆದಿರುವ ಮತ್ತು ಈ ಹೆಸರನ್ನೇ ಇರಿಸಿಕೊಂಡಿರುವ ಒಂದು ನಿಶ್ಚಿತ ರಸ್ತೆ. ಇದು ಪ್ರಪಂಚದಲ್ಲಿರುವ ರಸ್ತೆಯೊಂದರ ಒಂದು ಅನನ್ಯ ನಿದರ್ಶನ, ಆದರೂ ಇದರ ವೈಯಕ್ತಿಕ ಹೆಸರು ಕೇವಲ ನಮ್ಮ ಪ್ರಾಂತ್ಯದೊಳಗೆ ಅನನ್ಯವಾಗಿದೆ. ನಮ್ಮ ನೆರೆಹೊರೆಯ ಪ್ರಾಂತ್ಯವೂ ಸಹ ಬೀಚ್‌ ರಸ್ತೆ (Beach Road) ಎಂಬ ಹೆಸರನ್ನಿಟ್ಟುಕೊಂಡ ರಸ್ತೆಯೊಂದನ್ನು ಹೊಂದಿದೆ.]
  • ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿಯನ್ನು (Central Intelligence Agency) U.S. 1947ರಲ್ಲಿ ಸ್ಥಾಪಿಸಿತು.
  • ತನ್ನ ಹಲವಾರು ವಿದೇಶೀ ಗುಪ್ತಚರ ಸುದ್ದಿಸಂಗ್ರಹಣಾ ಪ್ರಯತ್ನಗಳನ್ನು ಸುಸಂಘಟಿತಗೊಳಿಸಲು ಒಂದು ಕೇಂದ್ರೀಯ ಗುಪ್ತಚರ ಸಂಸ್ಥೆಯನ್ನು (central intelligence agency) U.S. 1947ರಲ್ಲಿ ಸ್ಥಾಪಿಸಿತು. ಇದಕ್ಕೆ ಸೆಂಟ್ರಲ್‌ ಇಂಟೆಲಿಜೆನ್ಸ್‌ ಏಜೆನ್ಸಿ Central Intelligence Agency) ಎಂದು ಹೆಸರಿಸಲಾಯಿತು.
  • ದೇಶದ ಆಂತರಿಕ ವ್ಯವಹಾರಗಳ ಸಚಿವಖಾತೆಯೊಂದನ್ನು (ministry of home affairs) ಭಾರತವು ಹೊಂದಿದೆ. ಇದನ್ನು ಆಂತರಿಕ ವ್ಯವಹಾರಗಳ ಖಾತೆ (Ministry of Home Affairs) ಎಂದು ಕರೆಯಲಾಗುತ್ತದೆ. (ಭಾರತದ ಸಂದರ್ಭದೊಳಗೆ, ಇದು ಕೇವಲ ಆಂತರಿಕ ವ್ಯವಹಾರಗಳ ಖಾತೆಯಾಗಿರುವುದರಿಂದ, ನೀವು ರೂಢನಾಮವನ್ನು ದೊಡ್ಡಕ್ಷರಗಳಲ್ಲಿ ಬರೆಯುವುದರ ಮೂಲಕ ಹೆಸರಿಸಬಹುದು. ಭೂಗ್ರಹದ ಸಂದರ್ಭದೊಳಗೆ, ಇದೊಂದು ಅನನ್ಯ ಸಂಘಟನೆಯಾಗಿದೆ; ಆದರೆ ಇದಕ್ಕಾಗಿರುವ ಒಂದು ಅನನ್ಯ ವೈಯಕ್ತಿಕ ಹೆಸರಿನ ಕುರಿತು ಇತ್ಯರ್ಥಕ್ಕೆ ಬರುವಾಗ ರೂಢನಾಮವನ್ನು ದೊಡ್ಡಕ್ಷರದಲ್ಲಿ ಬರೆಯುವುದು ಒಂದು ಕಾರ್ಯಸಾಧ್ಯವಾದ ವಿಧಾನವಾಗುವುದಿಲ್ಲ, ಏಕೆಂದರೆ ಇತರ ದೇಶಗಳೂ ಸಹ ತಮ್ಮ ಅನನ್ಯ ಸಂಘಟನೆಗೆ ಅದೇ ಹೆಸರನ್ನು ಬಳಸಬಹುದು. ಅದೇ ಪರಿಕಲ್ಪನೆಯನ್ನು ಹೇಳಲು ಇರುವ ಮತ್ತೊಂದು ವಿಧಾನವೆಂದರೆ ಭಾರತದ ಹೆಸರಿನ ಅವಕಾಶದೊಳಗೆ, ಹೆಸರಿಸುವ ರೂಢಿಯು ಅನನ್ಯತೆಯ ಪ್ರತಿಪಾದಕತೆಯ ಸಾಕಷ್ಟು ಅನನ್ಯತೆಯನ್ನು ಒದಗಿಸುತ್ತದೆ; ಆದರೆ ಭೂಗ್ರಹದೊಳಗಿನ ಹೆಸರಿನ ಅವಕಾಶದೊಳಗೆ ಇದು ಒದಗಿಸುವುದಿಲ್ಲ. ಭೌತಿಕ ವಾಸ್ತವತೆಯಲ್ಲಿ ಹೇಳುವುದಾದರೆ, ಪ್ರತಿಯೊಂದು ದೇಶದ ಆಂತರಿಕ ಸಚಿವ ಖಾತೆಯು ವಿಶ್ವವ್ಯಾಪಿಯಾಗಿ ಒಂದು ಅನನ್ಯ ವಸ್ತುವಾಗಿದೆ. ಸರಳವಾಗಿ ಹೇಳುವುದಾದರೆ ಇದು ಹೆಸರಿಸುವ ಒಂದು ವಿಷಯವಾಗಿದೆ ಮತ್ತು ಸಂದರ್ಭದ ವ್ಯಾಪ್ತಿಯನ್ನು ಅವಲಂಬಿಸುವ ಅನನ್ಯವಾಗಿರುವ ಪ್ರತಿಪಾದನೆಯನ್ನು ಹೆಸರಿಸುವ ರೂಢಿಯೊಂದು ಒದಗಿಸುತ್ತದೆಯೇ ಇಲ್ಲವೇ ಎಂಬುದರ ಕುರಿತದ್ದಾಗಿದೆ.)
  • ಕಲೆ ಮತ್ತು ವಿಜ್ಞಾನ ವಿಷಯಗಳ ಕಾಲೇಜೊಂದನ್ನು (college of arts and sciences) ವಿಶ್ವವಿದ್ಯಾಲಯವು ಹೊಂದಿದೆ .
  • ಕಲೆ ಮತ್ತು ವಿಜ್ಞಾನ ವಿಷಯಗಳ ಕಾಲೇಜೊಂದನ್ನು ದಿ ಯೂನಿವರ್ಸಿಟಿ ಆಫ್‌ ಸ್ಯಾನ್‌ ಡಿಯೆಗೊ ಹೊಂದಿದ್ದು, ಅದನ್ನು ಕಾಲೇಜ್‌ ಆಫ್‌ ಆರ್ಟ್ಸ್‌ ಅಂಡ್‌ ಸೈನ್ಸಸ್‌ (College of Arts and Sciences) ಎಂದು ಕರೆಯಲಾಗುತ್ತದೆ.
  • ವಿಶ್ವವಿದ್ಯಾಲಯವು ವೈದ್ಯಕೀಯ ಶಾಲೆಯೊಂದನ್ನು (school of medicine) ಹೊಂದಿದೆ.
  • ಮನೋವಾದಲ್ಲಿರುವ ದಿ ಯೂನಿವರ್ಸಿಟಿ ಆಫ್‌ ಹವಾಯಿ ವೈದ್ಯಕೀಯ ಶಾಲೆಯೊಂದನ್ನು (school of medicine) ಹೊಂದಿದ್ದು, ಅದನ್ನು ಜಾನ್‌ A. ಬರನ್ಸ್‌ ಸ್ಕೂಲ್‌ ಆಫ್‌ ಮೆಡಿಸಿನ್‌ (School of Medicine.) ಎಂದು ಕರೆಯಲಾಗುತ್ತದೆ.
  • ಈ ವಾಯವ್ಯ ವಿಶ್ವವಿದ್ಯಾಲಯವು (northwestern university) ವೈದ್ಯಕೀಯ ಶಾಲೆಯೊಂದನ್ನು (school of medicine) ಹೊಂದಿದೆ.
  • ಚಿಕಾಗೋದಲ್ಲಿ ದಿ ನಾರ್ತ್‌ವೆಸ್ಟರ್ನ್‌ ಯೂನಿವರ್ಸಿಟಿ ಫೇನ್‌ಬರ್ಗ್‌ ಸ್ಕೂಲ್‌ ಆಫ್‌ ಮೆಡಿಸೀನ್‌ನ (The Northwestern University Feinberg School of Medicine) ಕೇಂದ್ರಕಚೇರಿಯಿದೆ.
  • ಗ್ರಹದ ಮೇಲೆ ಕಾಲಿರಿಸಲಿದ್ದ 16ನೇ ರೊಬಾಟ್‌ ಶೋಧಕಕ್ಕೆ ಗ್ರಹದ ಉತ್ತರ ಧ್ರುವದ ಅಧ್ಯಯನವನ್ನು ವಹಿಸಲಾಗಿತ್ತು, ಮತ್ತು 17ನೇ ಶೋಧಕಕ್ಕೆ (17th probe) ಅದರ ದಕ್ಷಿಣ ಧ್ರುವದ (south pole) ಅಧ್ಯಯನವನ್ನು ವಹಿಸಲಾಗಿತ್ತು. (ಮೊದಲಿನಿಂದ ಕೊನೆಯವರೆಗೆ ರೂಢನಾಮದ ಗ್ರಹಿಕೆಯಿದೆ)
  • ಪ್ರೋಬ್‌ 17 (Probe 17) ಶೋಧಕವು ಸೌತ್‌ ಪೋಲ್‌ (South Pole) ಮೇಲೆ ಹಾರಿಹೋದಾಗ, ಕ್ಯಾಪ್ಟನ್‌ ಸ್ಕಾಟ್‌ನ (Captain Scott) ಸಾಹಸಯಾತ್ರೆಯು ಅಂತ್ಯಗೊಂಡ ಸ್ಥಳದ ಮೇಲೆ ಅದು ನೇರವಾಗಿ ಹಾದುಹೋಯಿತು. (ಈ ಕಾಲ್ಪನಿಕ ವಾಕ್ಯದಲ್ಲಿ, ಭೂಮಿಯ ದಕ್ಷಿಣ ಧ್ರುವವು ಉಲ್ಲೇಖಿಸಲ್ಪಡುತ್ತಿದೆ, ಮತ್ತು ಸೌತ್‌‌ ಪೋಲ್‌ ಎಂಬುದು ಅದರ ವೈಯಕ್ತಿಕ ಹೆಸರಾಗಿದೆ‌.)

ಏಕೆಂದರೆ ಕಾಗುಣಿತದ ವರ್ಗೀಕರಣವು ಸೂಚ್ಯ ಅರಿವಿನ ಹಲವಾರು ಚೌಕಟ್ಟುಗಳಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದು ಇದು ಕೆಲವೊಮ್ಮೆ ಇಚ್ಛಾನುಸಾರಿಯಾಗಿದೆ. ಅಂದರೆ, ಯಾವುದೊಂದೂ "ತಪ್ಪಾಗಿರದ" ರೀತಿಯಲ್ಲಿ ವ್ಯಕ್ತಿಗಳು ವಿವಿಧ ಆಯ್ಕೆಗಳನ್ನು ಮಾಡಲು ಸಾಧ್ಯವಿದೆ, ಮತ್ತು ಅವರ ಬಗೆಬಗೆಯ ಚೌಕಟ್ಟುಗಳನ್ನು ಸಂಪೂರ್ಣ ವಿಶ್ವಾಸದ ಕಾರಣದಿಂದಾಗಿ ಪರಸ್ಪರರಿಗೆ ಸುಲಭವಾಗಿ ಅವರು ವಿವರಿಸುವಂತಿಲ್ಲ. ಆದಾಗ್ಯೂ, ಅಸಾಮಂಜಸ್ಯಗಳು ಎಂದು ಕರೆಯಲ್ಪಡುವ ಪಕ್ಕಪಕ್ಕದಲ್ಲಿರಿಸಿದ ದೊಡ್ಡಕ್ಷರ ಬಳಸುವಿಕೆಯ ವ್ಯತ್ಯಾಸಗಳನ್ನು ನೋಡುವುದನ್ನು ಓದುಗರು ಬಯಸುವುದಿಲ್ಲ. ಆದ್ದರಿಂದ, ಬಹುಪಾಲು ಪ್ರಕಾಶಕರು ಶೈಲಿ ಮಾರ್ಗದರ್ಶಿಗಳನ್ನು ಬಳಸಿಕೊಂಡು ಚೌಕಟ್ಟಿನ ರಚನೆಯ ನಿರಂತರ ನಿರ್ವಹಣೆಯನ್ನು ಸಂಕೇತೀಕರಿಸಲು ಪ್ರಯತ್ನಿಸುತ್ತಾರೆ. ಉದಾಹರಣೆಗೆ, ಅಸೋಸಿಯೇಟೆಡ್‌ ಪ್ರೆಸ್‌ನ AP ಸ್ಟೈಲ್‌ಬುಕ್‌ [೧೩] ಒಂದು ನಿಘಂಟು ಸ್ವರೂಪವನ್ನು ಅಥವಾ ಕ್ರಮವ್ಯವಸ್ಥೆಯನ್ನು ಬಳಸುತ್ತದೆ. ರೂಢನಾಮದ ಮತ್ತು ಅಂಕಿತನಾಮದ ಅರ್ಥಗಳು ಪರಸ್ಪರ ಅಡ್ಡಹಾಯುವ ಸಮಯಗಳಲ್ಲಿ APಯ ಆರಿಸಲ್ಪಟ್ಟ ತರ್ಕವನ್ನು ಹೇಗೆ ಸಮಂಜಸವಾಗಿ ಅಳವಡಿಸಿಕೊಳ್ಳಬೇಕು ಎಂಬುದರ ಕುರಿತು AP ಪತ್ರಕರ್ತರು ಹಾಗೂ ಸಂಪಾದಕರಿಗೆ ಇದರ ಅನೇಕ ನಮೂದುಗಳಲ್ಲಿ ಇದು ಮಾರ್ಗದರ್ಶನವನ್ನು ನೀಡುತ್ತದೆ. ಉದಾಹರಣೆಗೆ, ಫೆಡರಲ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಷನ್‌ (Federal Bureau of Investigation) ಎಂಬ ಸಂಸ್ಥೆಯನ್ನು ಮೊದಲಿಗೆ ನಮೂದಿಸಿದಾಗ, "ಬ್ಯೂರೋ" (Bureau) ಪದದ ಮೊದಲಕ್ಷರವನ್ನು ದೊಡ್ಡಕ್ಷರವಾಗಿ ಬರೆಯಲಾಗಿರುತ್ತದೆ. ಏಕೆಂದರೆ ಒಂದು ನಿಶ್ಚಿತ ಸೂಚಕವಾಗಿ ಅದು ಕಾರ್ಯನಿರ್ವಹಿಸುತ್ತದೆ, ಅಂದರೆ, ಇದು "ಸಂದರ್ಭೋಚಿತ ಅಂಕಿತನಾಮದ ಕರ್ತವ್ಯವನ್ನು ಸಲ್ಲಿಸುತ್ತಿರುವ" ಒಂದು ರೂಢನಾಮವಾಗಿದೆ. ಆದಾಗ್ಯೂ, "ಸಂಸ್ಥೆಯು ಪ್ರಕಟಿಸಿದೆ …" ಎಂಬಂಥ ತರುವಾಯದ ಉಲ್ಲೇಖಗಳು ಸಣ್ಣಕ್ಷರದಲ್ಲಿವೆ, ಏಕೆಂದರೆ ಸದರಿ ಪದವು ಅದರ ರೂಢನಾಮದ ಅರ್ಥದಲ್ಲಿ ಬಳಸಲ್ಪಡುತ್ತಿದೆ.[೧೩] ಇದೇ ತರ್ಕವು ಮಹಾಸಾಗರ (ocean) ಎಂಬ ಪದಕ್ಕೆ ಅನ್ವಯಿಸುತ್ತದೆ. ಈ ಕುರಿತು AP ಹೀಗೆ ಹೇಳುತ್ತದೆ, "ಮಹಾಸಾಗರ (ocean): ಇವು ಐದು ಸಂಖ್ಯೆಯಲ್ಲಿದ್ದು, ಅತ್ಯಂತ ದೊಡ್ಡದರಿಂದ ಅತ್ಯಂತ ಸಣ್ಣದರವರೆಗಿನ ಅನುಕ್ರಮದಲ್ಲಿ ಹೆಸರಿಸಲಾಗಿದೆ: ಶಾಂತ ಮಹಾಸಾಗರ (Pacific Ocean), ಅಟ್ಲಾಂಟಿಕ್‌ ಮಹಾಸಾಗರ (Atlantic Ocean), ಹಿಂದೂ ಮಹಾಸಾಗರ (Indian Ocean), ಅಂಟಾರ್ಕ್ಟಿಕ್‌ ಮಹಾಸಾಗರ (Antarctic Ocean), ಆರ್ಕ್ಟಿಕ್‌ ಮಹಾಸಾಗರ (Arctic Ocean). ಸಣ್ಣಕ್ಷರವಾದ ಮಹಾಸಾಗರ ವು (ocean) ಏಕಾಂಗಿಯಾಗಿ ಅಥವಾ ಬಹುವಚನಗಳ ಬಳಕೆಯಲ್ಲಿ ನಿಂತಿದೆ: ಮಹಾಸಾಗರ (the ocean), ಅಟ್ಲಾಂಟಿಕ್‌ ಮತ್ತು ಶಾಂತ ಮಹಾಸಾಗರಗಳು (the Atlantic and Pacific oceans)."[೧೩] ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಷನ್‌‌‌‌AMA ಮ್ಯಾನ್ಯುಯೆಲ್‌ ಆಫ್‌ ಸ್ಟೈಲ್‌ನ, 10ನೇ ಆವೃತ್ತಿ ಯು[೧೦] ತನ್ನ ಬಳಕೆದಾರರಿಗೆ ಇದೇ ರೀತಿಯ ಮಾರ್ಗದರ್ಶನವನ್ನು ನೀಡುತ್ತದೆ. ಉದಾಹರಣೆಗೆ, ಮಟ್ಟ (level) ಅಥವಾ ಪ್ರಕರಣ (case) ಅಥವಾ ಹಂತ (stage) ಈ ರೀತಿಯ ಪದಗಳು ನಿಶ್ಚಿತ-ಸೂಚಕ ಕರ್ತವ್ಯವನ್ನು ನಿರ್ವಹಿಸುತ್ತಿರುವಾಗಲೂ (ಉದಾಹರಣೆಗೆ, "ಪ್ರಕರಣ 5ರಲ್ಲಿ (case 5), ರೋಗಿಯು IIIA ಹಂತದ (stage IIIA) ಕಾಯಿಲೆಯನ್ನು ಹೊಂದಿರುವುದು ಕಂಡುಬಂತು") ಅವುಗಳನ್ನು ದೊಡ್ಡಕ್ಷರದ ಸ್ವರೂಪದಲ್ಲಿ ಇರಿಸದಿರುವುದು AMA ಶೈಲಿಯಾಗಿದೆ.[೧೦]

ದೊಡ್ಡಕ್ಷರ ನಾಮಕ ಅಥವಾ ನಿಶ್ಚಿತ ಸೂಚಕ?
[ಬದಲಾಯಿಸಿ]

ದೊಡ್ಡಕ್ಷರ ನಾಮಕಗಳು ಮತ್ತು ನಿಶ್ಚಿತ ಸೂಚಕಗಳ ಸ್ವಭಾವವು ಅನೇಕವೇಳೆ ಸಂಬಂಧವನ್ನು ಹೊಂದಿದೆ: ಎರಡೂ ಪ್ರಕರಣಗಳಲ್ಲಿ ಪದವೊಂದರ ಮೂಲದ ರೂಢನಾಮ ಮತ್ತು ಅಂಕಿತನಾಮದ ಗ್ರಹಿಕೆಗಳು ಒಂದಕ್ಕೊಂದು ತಾರ್ಕಿಕವಾಗಿ ಸಂಬಂಧವನ್ನು ಹೊಂದಿರಬಹುದು. ಕೆಲವೊಂದು ಪದಗಳನ್ನು ಒಂದೋ ದೊಡ್ಡಕ್ಷರ ನಾಮಕಗಳಾಗಿ ಅಥವಾ ನಿಶ್ಚಿತ ಸೂಚಕಗಳಾಗಿ ನೋಡಬಹುದಾಗಿರುತ್ತದೆ; ಅವುಗಳ ಅರ್ಹತೆಯ ನಿರ್ಣಯ ಅಥವಾ ಮೌಲ್ಯನಿರ್ಣಯವು ಕರ್ತೃವಿಗೆ ಸಂಬಂಧಿಸಿದುದಾಗಿರುತ್ತದೆ. ಉದಾಹರಣೆಗೆ:

  • ಚಂದ್ರ (moon) ಎಂಬ ರೂಢನಾಮವು ಗ್ರಹವೊಂದರ, ಸ್ವಾಭಾವಿಕ ಗ್ರಹದ-ರೀತಿಯಲ್ಲಿರುವ ಯಾವುದೇ ಉಪಗ್ರಹವನ್ನು ಸೂಚಿಸಿದರೆ, ಚಂದ್ರ (Moon) ಎಂಬ ಅಂಕಿತನಾಮವು ಒಂದು ನಿಶ್ಚಿತ ಚಂದ್ರನನ್ನು, ಅಂದರೆ, ಭೂಮಿಯ ಚಂದ್ರನನ್ನು ಉಲ್ಲೇಖಿಸುತ್ತದೆ. ನಿಘಂಟುಗಳು ವಿವರಣಾತ್ಮಕವಾಗಿ ಪ್ರತಿಬಿಂಬಿಸುವ ಪ್ರಕಾರ, ಎರಡನೆಯ ಗ್ರಹಿಕೆಯು "ಹಲವು ಬಾರಿ" ದೊಡ್ಡಕ್ಷರವಾಗಿ ಬರೆಯಲ್ಪಟ್ಟಿದೆ (ಇದರಿಂದಾಗಿ ಅವು "ವಿದ್ಯಾವಂತ ಬರಹಗಾರರ ಪ್ರಕಟಿತ ಬರಹದಲ್ಲಿ ಹಲವುವೇಳೆ [ಅಥವಾ ಸಾಮಾನ್ಯವಾಗಿ] ದೊಡ್ಡಕ್ಷರವಾಗಿ ಬರೆಯಲ್ಪಟ್ಟಿರುವುದಾಗಿ" ಸೂಚಿಸುತ್ತವೆ).[೧೧][೧೨]
  • ಮೇಲೆ ವಿವರಿಸಲಾದ ಚಂದ್ರ (moon)/ಚಂದ್ರ (Moon) ಎಂಬುದಕ್ಕೆ ಸಂಬಂಧಿಸಿದ ಅದೇ ಸ್ಥಿತಿಯು ಸೂರ್ಯ (sun)/ಸೂರ್ಯ (Sun) ಎಂಬುದನ್ನೂ ವಿವರಿಸುತ್ತದೆ.[೧೧][೧೨]
  • ದೇವರು (god) ಎಂಬ ರೂಢನಾಮವು ಯಾವುದೇ ಧರ್ಮಕ್ಕೆ ಸೇರಿದ ಯಾವುದೇ ದೇವತೆಯನ್ನು ಸೂಚಿಸಿದರೆ, ದೇವರು (God) ಎಂಬ ಅಂಕಿತನಾಮವು ಒಂದು ನಿಶ್ಚಿತವಾದ ಏಕದೈವವಾದದ ದೇವರನ್ನು ಉಲ್ಲೇಖಿಸುತ್ತದೆ. ನಿಘಂಟುಗಳು ವಿವರಣಾತ್ಮಕವಾಗಿ ಪ್ರತಿಬಿಂಬಿಸುವ ಪ್ರಕಾರ, ಎರಡನೆಯ ಗ್ರಹಿಕೆಯು ದೊಡ್ಡಕ್ಷರವಾಗಿ ಬರೆಯಲ್ಪಟ್ಟಿದೆ (ಇದರಿಂದಾಗಿ ಅವು "ವಿದ್ಯಾವಂತ ಬರಹಗಾರರ ಪ್ರಕಟಿತ ಬರಹದಲ್ಲಿ [ಬಹುಪಾಲು] ಯಾವಾಗಲೂ" ಸೂಚಿಸುತ್ತವೆ).[೧೧][೧೨]
  • ಕಿರೀಟ (crown) ಎಂಬ ರೂಢನಾಮವು ನಿಶ್ಚಿತ ಸಾರ್ವಭೌಮರನ್ನು ಉಲ್ಲೇಖಿಸುವಲ್ಲಿ ಗೌಣೀ ಪ್ರಯೋಗವಾಗಿ ಮಹಾಪ್ರಭು (Crown) ಎಂಬುದಾಗಿ ಮಾರ್ಪಾಡುಗೊಂಡಿದೆ. ಮಾನವ ಇತಿಹಾಸದಾದ್ಯಂತ, ಹಲವಾರು ಮಹಾಪ್ರಭುಗಳ (Crowns) ಉದಾಹರಣೆಗಳು ಮತ್ತು ಹಲವಾರು ಏಕೀಕೃತ ರಾಜ್ಯಗಳು (united kingdoms) ಬಂದುಹೋಗಿವೆ, ಆದರೆ ಇಂದು ಮಹಾಪ್ರಭು (Crown) ಮತ್ತು ಯುನೈಟೆಡ್‌ ಕಿಂಗ್‌ಡಂ (United Kingdom) ಇವು ಹಲವುವೇಳೆ/ಸಾಮಾನ್ಯವಾಗಿ ಒಂದು ನಿಶ್ಚಿತ ಉಲ್ಲೇಖವನ್ನು ಹೊಂದಿದ್ದು, ಅದು ವಿಶ್ವಾದ್ಯಂತ ಚಿರಪರಿಚಿತವಾಗಿದೆ (ಅಂದರೆ, ಬ್ರಿಟನ್‌ಗೆ ಸಂಬಂಧಿಸಿದಂತೆ).

ಕರ್ತೃವಿಗೆ ಸಂಬಂಧಿಸಿದ, ದೊಡ್ಡಕ್ಷರ ನಾಮಕ/ನಿಶ್ಚಿತ ಸೂಚಕದ ಈ ಎರಡೂ ಕಡೆಯ-ಸವಾರರನ್ನು ಒಗ್ಗೂಡಿಸುವ ವಿಷಯವೇನೆಂದರೆ, ಅವು ಕೇವಲ ವಿಶೇಷ ಪ್ರಕರಣಗಳಷ್ಟೇ ಆಗಿರದೆ ಅತ್ಯಂತ ವಿಶೇಷ ಪ್ರಕರಣಗಳಾಗಿವೆ. ರೂಢನಾಮದ ಗ್ರಹಿಕೆಯಿಂದ ಅಂಕಿತನಾಮದ ಗ್ರಹಿಕೆಯೆಡೆಗೆ, ಅಂದರೆ, ಅನೇಕ ನಿದರ್ಶನಗಳಿಂದ ಒಂದು ಅನನ್ಯ ನಿದರ್ಶನದೆಡೆಗೆ ವರ್ಗಾಯಿಸುವುದರ ಪರಿಭಾಷೆಯಲ್ಲಿ ಇವು ಅತ್ಯಂತ ವಿಶೇಷ ಪ್ರಕರಣಗಳೆನಿಸಿಕೊಂಡಿವೆ. ಇದರ ಜೊತೆಗೆ, ಆಕಾಶಕಾಯಗಳ ನಿದರ್ಶನದಲ್ಲಿ ಯಾವ ಗ್ರಹಿಕೆಯು ಮೊದಲು ಬಂದಿತು ಎಂಬುದು ಸ್ಪಷ್ಟವಾಗಿದ್ದು, ಅದು ಅಂಕಿತ ನಾಮದ ಗ್ರಹಿಕೆಯಾಗಿದೆ. ಮಾನವರು ತಮ್ಮ ಸಂದರ್ಭವನ್ನು ಅರಿಯುವಷ್ಟರಮಟ್ಟಿಗೆ ಭಾಷೆಯು ಮೊದಲು ಅಭಿವೃದ್ಧಿಗೊಂಡಾಗ, ಸೂರ್ಯ ಮತ್ತು ಚಂದ್ರರು ವಿಶ್ವವ್ಯಾಪಿಯಾಗಿ ಅನನ್ಯ ವಸ್ತುಗಳಾಗಿದ್ದರು. ಮಾನವರ ಸಂದರ್ಭ-ಸನ್ನಿವೇಶಗಳು ವಿಸ್ತೃತಗೊಂಡಂತೆ, ಸಾಮಾನ್ಯ ಬಗೆಯನ್ನು ಹೆಸರಿಸಲು ರೂಢನಾಮಗಳಿಗೆ ಸಂಬಂಧಿಸಿದ ಹೊಸದಾಗಿ ಕಂಡುಕೊಂಡ ಅವರ ಅಗತ್ಯವು ಹೊಸನಾಮ ಶಾಸ್ತ್ರದಿಂದ ಪೂರೈಸಲ್ಪಟ್ಟಿತು. ಇದರಲ್ಲಿ ರೂಢನಾಮವೊಂದನ್ನು ಸೃಷ್ಟಿಸಲು ಇರುವ ಬಹುಪಾಲು ತಾರ್ಕಿಕ ವಿಧಾನವು ಅದೇ ಪದವನ್ನು ಬಳಸುವುದಾಗಿತ್ತಾದರೂ, ಅದರ ಗ್ರಹಿಕೆ ಅಥವಾ ಅರ್ಥಗಳನ್ನು ವಿಶಾಲಗೊಳಿಸುವುದಾಗಿತ್ತು.

ಭಾಷಾಂತರದ ತೀರ್ಮಾನಗಳು
[ಬದಲಾಯಿಸಿ]

ಅಂಕಿತನಾಮವೊಂದನ್ನು ರೂಪಿಸುವ ಪದ ಅಥವಾ ಪದಗಳ ಸಾಮಾನ್ಯ ಅರ್ಥವು, ಅಂಕಿತನಾಮವು ಯಾವ ವಸ್ತುವಿಗೆ ಉಲ್ಲೇಖಿಸಲ್ಪಡುತ್ತದೋ ಅದಕ್ಕೆ ಸಂಬಂಧಪಡದೆ ಇರಬಹುದು. ಉದಾಹರಣೆಗೆ, ಯಾರೋ ಒಬ್ಬರು, ಅವರು ಒಂದು ಹುಲಿಯಾಗಲೀ ಅಥವಾ ಓರ್ವ ಲೋಹಕಾರನಾಗಲೀ ಆಗಿರದೇ ಇದ್ದರೂ, ಟೈಗರ್‌ ಸ್ಮಿತ್‌ ಎಂಬ ಹೆಸರನ್ನು ಇಟ್ಟುಕೊಂಡಿರಬಹುದು. ಈ ಕಾರಣಕ್ಕಾಗಿ, ಅಂಕಿತನಾಮಗಳು ಸಾಮಾನ್ಯವಾಗಿ ಭಾಷೆಗಳ ನಡುವೆ ಭಾಷಾಂತರಿಸಲ್ಪಡುವುದಿಲ್ಲ, ಆದರೆ ಅವನ್ನು ಲಿಪ್ಯಂತರಿಸಬಹುದು. ಉದಾಹರಣೆಗೆ, ನೀಡೆಲ್‌‌ (Knödel) ಎಂಬ ಜರ್ಮನ್‌‌ ಕುಲನಾಮವು ಇಂಗ್ಲಿಷ್‌ನಲ್ಲಿ ನೀಡೆಲ್‌‌ (Knodel) ಅಥವಾ ನಿಯೆಡೆಲ್‌‌ (Knoedel) ಎಂದು ಮಾರ್ಪಾಡಾಗುತ್ತದೆ (ಆದರೆ ಅಕ್ಷರಶಃ ನಾದಿದ ಹಿಟ್ಟು (Dumpling) ಎಂದು ಆಗುವುದಿಲ್ಲ). ಆದಾಗ್ಯೂ, ಸ್ಥಳದ ಹೆಸರುಗಳ ಪ್ರತಿಲಿಪಿ ಮತ್ತು ಸಾರ್ವಭೌಮರು, ಪೋಪ್‌‌‌ರು, ಮತ್ತು ಸಮಕಾಲೀನರಲ್ಲದ ಲೇಖಕರ ಹೆಸರುಗಳು ಸಾಮಾನ್ಯವಾಗಿರುತ್ತವೆ ಮತ್ತು ಕೆಲವೊಮ್ಮೆ ಸಾರ್ವತ್ರಿಕವಾಗಿರುತ್ತವೆ. ಇದಕ್ಕೆ ನಿದರ್ಶನವನ್ನು ನೀಡುವುದಾದರೆ, ಲಿಸ್ಬೋವಾ ಎಂಬ ಪೋರ್ಚುಗೀಸ್‌ ಪದವು ಇಂಗ್ಲಿಷ್‌‌‌ನಲ್ಲಿ ಲಿಸ್ಬನ್‌ ಎಂದಾಗುತ್ತದೆ; ಇಂಗ್ಲಿಷ್‌ನ ಲಂಡನ್‌ ಫ್ರೆಂಚ್‌ನಲ್ಲಿ ಲಂಡ್ರೆಸ್‌ ಎಂದಾಗುತ್ತದೆ; ಮತ್ತು ಗ್ರೀಕ್‌‌ನ Ἁριστοτέλης (ಅರಿಸ್ಟಾಟೆಲೆಸ್‌) ಇಂಗ್ಲಿಷ್‌ನಲ್ಲಿ ಅರಿಸ್ಟಾಟಲ್‌ ಎಂದಾಗುತ್ತದೆ.

ಎಣಿಸಬಹುದಾದ ಮತ್ತು ನಿತ್ಯೈಕವಚನದ ನಾಮಪದಗಳು

[ಬದಲಾಯಿಸಿ]

ಎಣಿಕೆಯ ನಾಮಪದಗಳು ರೂಢನಾಮಗಳಾಗಿದ್ದು, ಅವು ಒಂದು ಬಹುವಚನವನ್ನು ತೆಗೆದುಕೊಳ್ಳಬಲ್ಲವಾಗಿರುತ್ತವೆ, ಸಂಖ್ಯಾವಾಚಕಗಳು ಅಥವಾ ಪರಿಮಾಣಕಗಳೊಂದಿಗೆ (ಉದಾಹರಣೆಗೆ, ಒಂದು , ಎರಡು , ಹಲವಾರು , ಪ್ರತಿಯೊಂದು , ಬಹುಪಾಲು ) ಸೇರಬಲ್ಲವಾಗಿರುತ್ತವೆ, ಮತ್ತು ಒಂದು ಅನಿರ್ದೇಶಕ ಗುಣವಾಚಿಯನ್ನು (a ಅಥವಾ an ) ತೆಗೆದುಕೊಳ್ಳಬಲ್ಲವಾಗಿರುತ್ತವೆ. ಕುರ್ಚಿ , ಮೂಗು , ಮತ್ತು ವಿಶೇಷ-ಘಟನೆ ಇವು ಎಣಿಕೆಯ ನಾಮಪದಗಳ ಉದಾಹರಣೆಗಳಾಗಿವೆ.

ರಾಶಿ ನಾಮಪದಗಳು (ಅಥವಾ ಎಣಿಸಲಾಗದ ನಾಮಪದಗಳು ) ಎಣಿಕೆಯ ನಾಮಪದಗಳಿಗಿಂತ ಭಿನ್ನವಾಗಿವೆ. ಕರಾರುವಾಕ್ಕಾಗಿ ಹೇಳುವುದಾದರೆ, ಅವು ಬಹುವಚನವನ್ನು ತೆಗೆದುಕೊಳ್ಳಲಾರವು ಅಥವಾ ಸಂಖ್ಯಾಪದಗಳೊಂದಿಗೆ ಅಥವಾ ಪರಿಮಾಣಕಗಳೊಂದಿಗೆ ಸೇರಲಾರವು. ಇಂಗ್ಲಿಷ್‌ನಿಂದ ಬಂದಿರುವ ಉದಾಹರಣೆಗಳಲ್ಲಿ ನಗುವಿಕೆ , ಚಾಕುಕತ್ತರಿಗಳು , ಹೀಲಿಯಂ , ಮತ್ತು ಪೀಠೋಪಕರಣ ಮೊದಲಾದವು ಸೇರಿವೆ. ಉದಾಹರಣೆಗೆ, ಒಂದು ಪೀಠೋಪಕರಣ ಅಥವಾ ಮೂರು ಪೀಠೋಪಕರಣಗಳು ಎಂದು ಉಲ್ಲೇಖಿಸಲು ಸಾಧ್ಯವಿಲ್ಲ. ಪೀಠೋಪಕರಣ ವನ್ನು ರಚಿಸಿರುವ ಪೀಠೋಪಕರಣದ ತುಣುಕುಗಳನ್ನು ಲೆಕ್ಕಹಾಕಲು ಸಾಧ್ಯವಿದ್ದಾಗಲೂ ಸಹ ಇದು ಸತ್ಯವಾಗಿದೆ. ಈ ರೀತಿಯಲ್ಲಿ, ಯಾವ ಬಗೆಗಳ ವಸ್ತುಗಳಿಗೆ ನಾಮಪದಗಳು ಉಲ್ಲೇಖಿಸಲ್ಪಡುತ್ತವೆ ಎಂಬ ಪರಿಭಾಷೆಯಲ್ಲಿ ರಾಶಿ ನಾಮಪದಗಳು ಮತ್ತು ಎಣಿಕೆಯ ನಾಮಪದಗಳ ನಡುವಿನ ವೈಲಕ್ಷಣ್ಯವನ್ನು ಮಾಡಬಾರದು, ಆದರೆ ಅದರ ಬದಲಿಗೆ ಈ ಇರುವಿಕೆಗಳನ್ನು ನಾಮಪದಗಳು ಹೇಗೆ ಪ್ರಸ್ತುತ ಪಡಿಸುತ್ತವೆ ಎಂಬ ಪರಿಭಾಷೆಯಲ್ಲಿ ಮಾಡಬೇಕು.[೧೪][೧೫]

ಸಮುದಾಯವಾಚಕ ನಾಮಪದಗಳು

[ಬದಲಾಯಿಸಿ]

ಸಮುದಾಯವಾಚಕ ನಾಮಪದಗಳು ನಾಮಪದಗಳಾಗಿದ್ದು, ಒಂದಕ್ಕಿಂತ ಹೆಚ್ಚು ವ್ಯಕ್ತಿ ಅಥವಾ ಇರುವಿಕೆಯನ್ನು (ವಸ್ತುವನ್ನು) ಒಳಗೊಂಡಿರುವ ಗುಂಪುಗಳನ್ನು , ಒಂದು ವೇಳೆ ಅವು ಏಕವಚನಕ್ಕಾಗಿ ರೂಪನಿಷ್ಪತ್ತಿಮಾಡಲ್ಪಟ್ಟಿದ್ದರೂ ಸಹ ಅವು ಉಲ್ಲೇಖಿಸುತ್ತವೆ. ಉದಾಹರಣೆಗಳಲ್ಲಿ ಸಮಿತಿ , ಹಿಂಡು , ಮತ್ತು (ಮೀನಿನ) ಭಾರೀ ಗುಂಪು ಇವು ಸೇರಿವೆ. ಈ ನಾಮಪದಗಳು ಇತರ ನಾಮಪದಗಳಿಗಿಂತ ಕೊಂಚ ವಿಭಿನ್ನವಾದ ವ್ಯಾಕರಣಬದ್ಧವಾದ ಲಕ್ಷಣಗಳನ್ನು ಹೊಂದಿವೆ. ಉದಾಹರಣೆಗೆ, ಅವು ಮುನ್ನಡೆಸುವ ನಾಮಪದ ವಾಕ್ಯಾಂಗಗಳು, ಒಂದು ವೇಳೆ ಅವು ಏಕವಚನಕ್ಕಾಗಿ ರೂಪನಿಷ್ಪತ್ತಿಮಾಡಲ್ಪಟ್ಟಿದ್ದರೂ ಸಹ, ಸಮುದಾಯವಾಚಕ ಆಖ್ಯಾತವೊಂದರ ಕರ್ತೃಪದವಾಗಿ ಅವು ಸೇವೆಸಲ್ಲಿಸಬಲ್ಲವು. ಒಂದು ಸಮುದಾಯವಾಚಕ ಆಖ್ಯಾತವು, ಏಕವಚನದ ಕರ್ತೃಪದವವೊಂದನ್ನು ಸಾಮಾನ್ಯವಾಗಿ ತೆಗೆದುಕೊಳ್ಳಲಾರದ ಒಂದು ಆಖ್ಯಾತವಾಗಿದೆ. ತಮ್ಮತಮ್ಮಲ್ಲೇ ಮಾತಾಡಿಕೊಂಡರು (talked amongst themselves) ಎಂಬುದು ಎರಡನೆಯದಕ್ಕೆ ಸಂಬಂಧಿಸಿದ ಒಂದು ಉದಾಹರಣೆಯಾಗಿದೆ.

ಉತ್ತಮ ಪ್ರಯೋಗ: ಹುಡುಗರು ತಮ್ಮತಮ್ಮಲ್ಲೇ ಮಾತಾಡಿಕೊಂಡರು.
ಕೆಟ್ಟ ಪ್ರಯೋಗ: *ಹುಡುಗನು ತಮ್ಮತಮ್ಮಲ್ಲೇ ಮಾತಾಡಿಕೊಂಡರು.
ಕೆಟ್ಟ ಪ್ರಯೋಗ: ಸಮಿತಿ ಯು ತಮ್ಮತಮ್ಮಲ್ಲೇ ಮಾತಾಡಿಕೊಂಡರು.[dubious ]

ವಸ್ತುವಾಚಕ ನಾಮಪದಗಳು ಮತ್ತು ಭಾವನಾಮಗಳು

[ಬದಲಾಯಿಸಿ]

ಕನಿಷ್ಟ ಪಕ್ಷ ಮೂಲಭೂತ ತತ್ತ್ವದ ದೃಷ್ಟಿಯಿಂದ ಇಂದ್ರಿಯಗಳ ಪೈಕಿ ಒಂದರಿಂದ ಗಮನಕ್ಕೆ ತಂದುಕೊಳ್ಳಬಹುದಾದ ಭೌತಿಕ ಇರುವಿಕೆಗಳಿಗೆ (ಅಂದರೆ ವಸ್ತುಗಳಿಗೆ) (ಉದಾಹರಣೆಗೆ, ಕುರ್ಚಿ , ಸೇಬು , ಜನೆಟ್‌ ಅಥವಾ ಅಣು ) ವಸ್ತುವಾಚಕ ನಾಮಪದಗಳು ಉಲ್ಲೇಖಿಸಲ್ಪಡುತ್ತವೆ. ಮತ್ತೊಂದೆಡೆ, ಅಮೂರ್ತ ವಸ್ತುಗಳಿಗೆ ಭಾವನಾಮಗಳು ಉಲ್ಲೇಖಿಸಲ್ಪಡುತ್ತವೆ; ಅಂದರೆ ಕಲ್ಪನೆಗಳು ಅಥವಾ ಪರಿಕಲ್ಪನೆಗಳಿಗೆ (ನ್ಯಾಯ ಅಥವಾ ದ್ವೇಷ ಈ ರೀತಿಯವು) ಅವು ಉಲ್ಲೇಖಿಸಲ್ಪಡುತ್ತವೆ. ಈ ವೈಲಕ್ಷಣ್ಯವು ಕೆಲವೊಮ್ಮೆ ಪ್ರಯೋಜನಕಾರಿಯಾಗಿರುವ ಸಮಯದಲ್ಲೇ, ವಸ್ತುವಾಚಕ ಮತ್ತು ಅಮೂರ್ತದ ನಡುವಿನ ಸೀಮಾರೇಖೆಯು ಎಲ್ಲ ಸಮಯದಲ್ಲೂ ಸ್ಪಷ್ಟವಾಗಿಲ್ಲ; ಉದಾಹರಣೆಗೆ, ಕಲೆ (art) ಎಂಬ ನಾಮಪದವನ್ನು ಪರಿಗಣಿಸಿ, ಇದು ಸಾಮಾನ್ಯವಾಗಿ ಒಂದು ಪರಿಕಲ್ಪನೆಗೆ ಉಲ್ಲೇಖಿಸಲ್ಪಡುತ್ತದೆಯಾದರೂ (ಉದಾಹರಣೆಗೆ, ಕಲೆಯು ಮಾನವ ಸಂಸ್ಕೃತಿಯ ಒಂದು ಪ್ರಮುಖ ಭಾಗವಾಗಿದೆ [Art is an important element of human culture]), ಕೆಲವೊಂದು ಸಂದರ್ಭಗಳಲ್ಲಿ ಒಂದು ನಿಶ್ಚಿತ ಕಲಾಕೃತಿಗೂ (ಉದಾಹರಣೆಗೆ, ನನ್ನ ಮಗಳ ಕಲಾಕೃತಿಯನ್ನು ನಾನು ಶೀತಕಯಂತ್ರದ ಮೇಲ್ಭಾಗದಲ್ಲಿ ಹಾಕುವೆ [I put my daughter's art up on the fridge]) ಇದು ಉಲ್ಲೇಖವಾಗಬಲ್ಲದು.

ಇಂಗ್ಲಿಷ್‌ನಲ್ಲಿ, ನಾಮಪದವನ್ನು-ರೂಪಿಸುವ ಉತ್ತರ ಪ್ರತ್ಯಯಗಳನ್ನು (-ಇರುವ ಸ್ಥಿತಿ [-ness], -ಗುಣದ ಸ್ಥಿತಿ [-ity], -ಕಾರ್ಯಸೂಚಕ [-tion]) ಗುಣವಾಚಕಗಳಿಗೆ ಅಥವಾ ಕ್ರಿಯಾಪದಗಳಿಗೆ ಸೇರಿಸುವ ಮೂಲಕ ಅನೇಕ ಭಾವನಾಮಗಳು ರೂಪುಗೊಳ್ಳುತ್ತವೆ. ಇದರ ಉದಾಹರಣೆಗಳು ಹೀಗಿವೆ: ಸಂತೋಷ (ಸಂತೋಷದ ಎಂಬ ಗುಣವಾಚಕದಿಂದ ಬಂದದ್ದು), ಹರಡುವಿಕೆ (ಹರಡು ಎಂಬ ಕ್ರಿಯಾಪದದಿಂದ ಬಂದದ್ದು) ಮತ್ತು ಪ್ರಶಾಂತತೆ (ಪ್ರಶಾಂತ ಎಂಬ ಗುಣವಾಚಕದಿಂದ ಬಂದದ್ದು).

ನಾಮಪದಗಳು ಮತ್ತು ಸರ್ವನಾಮಗಳು

[ಬದಲಾಯಿಸಿ]

ಪುನರಾವರ್ತನೆಯನ್ನು ತಪ್ಪಿಸುವ ದೃಷ್ಟಿಯಿಂದ ಅಥವಾ ಸುಸ್ಪಷ್ಟ ಗುರುತಿಸುವಿಕೆಯ ಕಾರಣದಿಂದ ಅಥವಾ ಇತರ ಕಾರಣಗಳಿಗಾಗಿ ನಾಮಪದಗಳು ಮತ್ತು ನಾಮಪದದ ವಾಕ್ಯಾಂಗಗಳನ್ನು ಅವನು , ಅದು , ಯಾವುದು , ಮತ್ತು ಅವು ಈ ರೀತಿಯ ಸರ್ವನಾಮಗಳಿಂದ ವಿಶಿಷ್ಟವಾಗಿ ಸ್ಥಾನಪಲ್ಲಟಗೊಳಿಸಬಹುದು. ಉದಾಹರಣೆಗೆ, ಜನೆಟ್‌ ತಾನು ವಿಲಕ್ಷಣವಾಗಿದ್ದುದಾಗಿ ಭಾವಿಸಿದ (Janet thought that he was weird) ಎಂಬ ವಾಕ್ಯದಲ್ಲಿ ತಾನು ಎಂಬ ಪದವು ಒಂದು ಸರ್ವನಾಮವಾಗಿದ್ದು, ಉಲ್ಲೇಖಿಸಲಾದ ವ್ಯಕ್ತಿಯ ಹೆಸರಿನ ಸ್ಥಳದಲ್ಲಿ ಅದು ನಿಂತಿದೆ. ಒಂದು ಎಂಬ ಇಂಗ್ಲಿಷ್‌ ಪದವು ನಾಮಪದದ ವಾಕ್ಯಾಂಗಗಳ ಭಾಗಗಳನ್ನು ಪಲ್ಲಟಗೊಳಿಸಬಲ್ಲದು ಮತ್ತು ಇದು ಕೆಲವೊಮ್ಮೆ ಒಂದು ನಾಮಪದದ ಬದಲಿಯಾಗಿ ಪಾತ್ರ ನಿರ್ವಹಿಸುತ್ತದೆ. ಇದಕ್ಕೆ ಸಂಬಂಧಿಸಿದ ಒಂದು ಉದಾಹರಣೆಯನ್ನು ಕೆಳಗೆ ನೀಡಲಾಗಿದೆ:

ಜಾನ್‌ನ ಕಾರು ಬಿಲ್‌‌ನ ಬಳಿಯಿರುವುದರ ಒಂದಕ್ಕಿಂತ ಹೊಸದಾಗಿದೆ.

ಆದರೆ ಒಂದು ಎಂಬ ಪದವು ಒಂದು ನಾಮಪದದ ವಾಕ್ಯಾಂಗದ ದೊಡ್ಡ ಉಪಭಾಗಗಳ ಬದಲಿಯಾಗಿಯೂ ಪಾತ್ರನಿರ್ವಹಿಸಬಲ್ಲದು. ಉದಾಹರಣೆಗೆ, ಈ ಕೆಳಗಿನ ಉದಾಹರಣೆಯಲ್ಲಿ, ಒಂದು ಎಂಬುದು ಹೊಸ ಕಾರು ಎಂಬುದರ ಬದಲಿ ಪದವಾಗಿ ಪಾತ್ರನಿರ್ವಹಿಸಬಲ್ಲದು:

ಈ ಹೊಸ ಕಾರು ಆ ಒಂದಕ್ಕಿಂತ ಅಗ್ಗವಾಗಿದೆ.

ನಾಮಪದ ಕ್ಕಾಗಿರುವ ಒಂದು ಪದವಾದ ನಾಮವಾಚಕ

[ಬದಲಾಯಿಸಿ]

ಹಳೆಯ ಲ್ಯಾಟಿನ್‌ ವ್ಯಾಕರಣಗಳಿಂದ ಮೊದಲ್ಗೊಂಡು, ಅನೇಕ ಐರೋಪ್ಯ ಭಾಷೆಗಳು ನಾಮಪದಕ್ಕೆ ಸಂಬಂಧಿಸಿದ ಮೂಲಭೂತ ಪದವಾಗಿ ಸಬ್‌ಸ್ಟಾಂಟಿವ್‌ ಎಂಬ ಪದದ ಕೆಲವು ಸ್ವರೂಪವನ್ನು ಬಳಸುತ್ತವೆ (ಉದಾಹರಣೆಗೆ, ಸ್ಪಾನಿಷ್‌ ಸಸ್ಟಾಂಟಿವೊ , "ನಾಮಪದ"). ಇಂಥ ಭಾಷೆಗಳ ನಿಘಂಟುಗಳಲ್ಲಿನ ನಾಮಪದಗಳು n ಎಂಬ ಸಂಕ್ಷಿಪ್ತ ರೂಪಕ್ಕೆ ಬದಲಾಗಿ s. ಅಥವಾ sb. ಎಂಬ ಸಂಕ್ಷಿಪ್ತ ರೂಪದಿಂದ ಗುರುತಿಸಲ್ಪಟ್ಟಿವೆ. n ಎಂಬ ಸಂಕ್ಷಿಪ್ತ ರೂಪವನ್ನು ಬದಲಿಯಾಗಿ ಅಂಕಿತನಾಮಗಳಿಗಾಗಿ ಬಳಸಬಹುದಾಗಿದೆ. ಉದಾಹರಣೆಗೆ, ಇಂಗ್ಲಿಷ್‌ ಪದವಾದ ಆಖ್ಯಾತ ಗುಣವಾಚಕವು ಒಳಪಡಿಸುವುದಕ್ಕಿಂತ ಹೆಚ್ಚಿನ ಪ್ರದೇಶಗಳಲ್ಲಿ ನಾಮಪದಗಳು ಮತ್ತು ಗುಣವಾಚಕಗಳು ಪರಸ್ಪರ ಬಳಕೆಗೆ ಬರುವಲ್ಲಿನ ವ್ಯಾಕರಣಗಳಿಗೆ ಇದು ಹೆಚ್ಚು ಸಂಬಂಧಪಡುತ್ತದೆ. ಉದಾಹರಣೆಗೆ, ಫ್ರೆಂಚ್‌ ಮತ್ತು ಸ್ಪಾನಿಷ್ ಭಾಷೆಯಲ್ಲಿ, ಗುಣವಾಚಕದ ಲಕ್ಷಣಗಳನ್ನು ಹೊಂದಿರುವ ಜನರನ್ನು ಉಲ್ಲೇಖಿಸುತ್ತಾ, ಗುಣವಾಚಕಗಳು ಮೇಲಿಂದಮೇಲೆ ನಾಮಪದಗಳಾಗಿ ಪಾತ್ರವಹಿಸುತ್ತವೆ. ಈ ಪರಿಕಲ್ಪನೆಯನ್ನು ಹೆಸರಿಸಲು ಇರುವ ಅತ್ಯಂತ ಸಾಮಾನ್ಯ ಅಧಿಭಾಷೆಯೆಂದರೆ ನಾಮವಾಚಕವನ್ನು ರೂಪಿಸುವುದು (nominalization). ಇಂಗ್ಲಿಷ್‌ನಲ್ಲಿರುವ ಒಂದು ಉದಾಹರಣೆಯು ಹೀಗಿದೆ:

ಈ ಶಾಸನವು ಬಡವರ ಮೇಲೆ ಅತ್ಯಂತ ಪರಿಣಾಮವನ್ನು ಬೀರಲಿದೆ.

ಅದೇ ರೀತಿಯಲ್ಲಿ, ಒಂದು ಗುಣವಾಚಕವನ್ನು ಜನರ ಒಂದು ಸಮಗ್ರ ಗುಂಪು ಅಥವಾ ಸಂಘಟನೆಗೂ ಬಳಸಬಹುದಾಗಿದೆ:

ದಿ ಸೋಷಲಿಸ್ಟ್‌ ಇಂಟರ್‌ನ್ಯಾಷನಲ್‌ .

ಆದ್ದರಿಂದ, ಇಂಗ್ಲಿಷ್‌ನಲ್ಲಿ ಸಾಮಾನ್ಯವಾಗಿ ಗುಣವಾಚಕಗಳಾಗಿರುವ ಈ ಪದಗಳು ನಾಮವಾಚಕಗಳಾಗಿವೆ.

ನಾಮಮಾತ್ರದ (nominal) ಎಂಬ ಪದವು ನಾಮಪದ ಮತ್ತು ಗುಣವಾಚಕ ದೊಂದಿಗಿನ ಅರ್ಥ ಮತ್ತು ಬಳಕೆಯಲ್ಲಿಯೂ ಅತಿಕ್ರಮಿಸುತ್ತದೆ.

ಇವನ್ನೂ ಗಮನಿಸಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. ‌ಲೂಸ್, ಯೂಜೀನ್‌ E., ಮತ್ತು ಇತರರು 2003. ಗ್ಲಾಸರಿ ಆಫ್‌ ಲಿಂಗ್ವಿಸ್ಟಿಕ್‌ ಟರ್ಮ್ಸ್‌: ವಾಟ್‌ ಈಸ್‌ ಎ ನೌನ್‌?
  2. ಡೇವಿಡ್‌ಸನ್‌, ಡೊನಾಲ್ಡ್‌. 1967. ದಿ ಲಾಜಿಕಲ್‌ ಫಾರ್ಮ್‌ ಆಫ್‌ ಆಕ್ಷನ್‌ ಸೆಂಟೆನ್ಸಸ್‌. ನಿಕೋಲಸ್‌ ರೆಷರ್‌‌ ಸಂಪಾದಿತ, ದಿ ಲಾಜಿಕ್‌ ಆಫ್‌ ಡಿಸಿಷನ್‌ ಅಂಡ್‌ ಆಕ್ಷನ್‌ ಕೃತಿಯಲ್ಲಿರುವುದು, ಪಿಟ್ಸ್‌ಬರ್ಗ್‌, ಪೆನ್ಸಿಲ್ವೇನಿಯಾ: ಯೂನಿವರ್ಸಿಟಿ ಆಫ್‌ ಪಿಟ್ಸ್‌ಬರ್ಗ್‌ ಪ್ರೆಸ್‌.
  3. ‌‌ಪಾರ್ಸನ್ಸ್, ಟೆರೆನ್ಸ್‌. 1990. ಇವೆಂಟ್ಸ್‌ ಇನ್‌ ದಿ ಸೆಮ್ಯಾಂಟಿಕ್ಸ್‌ ಆಫ್‌ ಇಂಗ್ಲಿಷ್‌: ಎ ಸ್ಟಡಿ ಇನ್‌ ಸಬ್‌ಅಟಾಮಿಕ್‌ ಸೆಮ್ಯಾಂಟಿಕ್ಸ್‌. ಕೇಂಬ್ರಿಜ್‌, ಮ್ಯಾಸಚೂಸೆಟ್ಸ್‌‌: MIT ಪ್ರೆಸ್‌
  4. ಗೀಚ್‌, ಪೀಟರ್‌‌. 1962. ರೆಫರೆನ್ಸ್‌ ಅಂಡ್‌ ಜೆನರಾಲಿಟಿ. ಕಾರ್ನೆಲ್‌ ಯೂನಿವರ್ಸಿಟಿ ಪ್ರೆಸ್‌.
  5. ೫.೦ ೫.೧ ಗುಪ್ತ, ಅನಿಲ್‌. 1980, ದಿ ಲಾಜಿಕ್‌ ಆಫ್‌ ಕಾಮನ್‌ ನೌನ್ಸ್‌. ನ್ಯೂ ಹ್ಯಾವನ್‌ ಅಂಡ್‌ ಲಂಡನ್‌: ಯೇಲ್‌ ಯೂನಿವರ್ಸಿಟಿ ಪ್ರೆಸ್‌.
  6. ‌ಕ್ರಾಫ್ಟ್, ವಿಲಿಯಂ. 1993. "ಎ ನೌನ್‌ ಈಸ್‌ ಎ ನೌನ್‌ ಈಸ್‌ ಎ ನೌನ್‌ - ಆರ್‌ ಈಸ್‌ ಇಟ್‌? ಸಮ್‌ ರಿಫ್ಲೆಕ್ಷನ್ಸ್‌ ಆನ್‌ ಯೂನಿವರ್ಸಾಲಿಟಿ ಆಫ್‌ ಸೆಮ್ಯಾಂಟಿಕ್ಸ್‌". ಪ್ರೊಸೀಡಿಂಗ್ಸ್‌ ಆಫ್‌ ನೈಂಟೀನ್ತ್‌‌ ಆನ್ಯುಯಲ್‌ ಮೀಟಿಂಗ್‌ ಆಫ್‌ ದಿ ಬರ್ಕ್‌ಲಿ ಲಿಂಗ್ವಿಸ್ಟಿಕ್ಸ್‌ ಸೊಸೈಟಿ, ಸಂಪಾದಕರು: ಜೋಷುವಾ S. ಗೆಂಟರ್‌, ಬಾರ್ಬರಾ A. ಕೈಸರ್‌‌ ಮತ್ತು ಚೆರಿಲ್‌‌ C. ಝೋಲ್‌, 369-80. ಬರ್ಕ್‌ಲಿ: ಬರ್ಕ್‌ಲಿ ಲಿಂಗ್ವಿಸ್ಟಿಕ್ಸ್‌ ಸೊಸೈಟಿ.
  7. ಬೇಕರ್‌, ಮಾರ್ಕ್‌. 2003, ಲೆಕ್ಸಿಕಲ್‌ ಕೆಟಗರೀಸ್‌: ವರ್ಬ್ಸ್‌, ನೌನ್ಸ್‌, ಅಂಡ್‌ ಅಡ್ಜೆಕ್ಟಿವ್ಸ್‌. ಕೇಂಬ್ರಿಜ್‌ ಯೂನಿವರ್ಸಿಟಿ ಪ್ರೆಸ್‌, ಕೇಂಬ್ರಿಜ್‌.
  8. Lester, Mark; Larry Beason (2005). The McGraw-Hill Handbook of English Grammar and Usage. McGraw-Hill. p. 4. ISBN 0-07-144133-6.{{cite book}}: CS1 maint: multiple names: authors list (link)
  9. Steeves, Jon, Online Dictionary of Language Terminology
  10. ೧೦.೦ ೧೦.೧ ೧೦.೨ Iverson, Cheryl (editor) (2007), AMA Manual of Style (10 ed.), Oxford, England: Oxford University Press, ISBN 9780195176339 {{citation}}: |first= has generic name (help), ವಿಭಾಗ 10.4: ಸೂಚಕಗಳು.
  11. ೧೧.೦ ೧೧.೧ ೧೧.೨ ೧೧.೩ ೧೧.೪ Houghton Mifflin (2000), The American Heritage Dictionary of the English Language (4th ed ed.), Boston and New York: Houghton Mifflin, ISBN 978-0-395-82517-4 {{citation}}: |edition= has extra text (help)
  12. ೧೨.೦ ೧೨.೧ ೧೨.೨ ೧೨.೩ Merriam-Webster (1993), Merriam-Webster's Collegiate Dictionary (10th ed ed.), Springfield, Massachusetts, USA: Merriam-Webster, ISBN 978-0877797074 {{citation}}: |edition= has extra text (help)
  13. ೧೩.೦ ೧೩.೧ ೧೩.೨ Associated Press (2007), The Associated Press Stylebook (42 ed.), New York, NY, USA: Basic Books, ISBN 978-0-465-00489-8
  14. ಕ್ರಿಫ್ಕಾ, ಮನ್‌ಫ್ರೆಡ್‌. 1989. "ನಾಮಿನಲ್‌ ರೆಫರೆನ್ಸ್‌, ಟೆಂಪೊರಲ್‌ ಕಾನ್ಸ್ಟಿಟ್ಯೂಷನ್‌ ಅಂಡ್‌ ಕ್ವಾಂಟಿಫಿಕೇಷನ್‌ ಇನ್‌ ಇವೆಂಟ್‌ ಸೆಮ್ಯಾಂಟಿಕ್ಸ್‌". R. ಬಾರ್ಟ್ಸ್ಕ್‌, J. ವಾನ್‌ ಬೆಂಥೆಮ್‌, P. ವಾನ್‌ ಎಮ್ಡೆ ಬೋವಾಸ್‌ (ಸಂಪಾದಿತ), ಎಮ್ಯಾಂಟಿಕ್ಸ್‌ ಅಂಡ್‌ ಕಾಂಟೆಕ್ಸ್‌ಚುಯೆಲ್‌ ಎಕ್ಸ್‌ಪ್ರೆಷನ್‌ ಕೃತಿಯಲ್ಲಿರುವುದು; ಡೋರ್ಡ್ರೆಕ್ಟ್‌: ಫೋರಿಸ್‌ ಪಬ್ಲಿಕೇಷನ್‌.
  15. ‌ಬೋರರ್‌, ಹ್ಯಾಗಿಟ್. 2005. ಇನ್‌ ನೇಮ್‌ ಓನ್ಲಿ. ಸ್ಟ್ರಕ್ಚರಿಂಗ್‌ ಸೆನ್ಸ್‌‌, ಸಂಪುಟ I. ಆಕ್ಸ್‌‌ಫರ್ಡ್‌: ಆಕ್ಸ್‌‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌.


ಗ್ರಂಥಸೂಚಿ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ನಾಮಪದ&oldid=1209049" ಇಂದ ಪಡೆಯಲ್ಪಟ್ಟಿದೆ